

ಲಂಡನ್: ಅಫ್ಘಾನ್ ನ ತಾಲಿಬಾನ್ ಮುಖಂಡ ಮುಲ್ಲಾ ಮೊಹಮದ್ ಓಮರ್ ಮೃತಪಟ್ಟಿರುವ ಬಗ್ಗೆ ಬಿಬಿಸಿ ವರದಿ ಮಾಡಿದೆ.
ತಾಲಿಬಾನ್ ಮುಖಂಡ ಮುಲ್ಲಾ ಮೊಹಮದ್ ಓಮರ್ ಮೃತಪಟ್ಟಿದ್ದಾನೆ ಎಂದು ಅಫ್ಘಾನಿಸ್ತಾನ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಆದರೆ ಈ ಹೇಳಿಕೆ ಬಗ್ಗೆ ತಾಲಿಬಾನ್ ಉಗ್ರ ಸಂಘಟನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ಎರಡು ಮೂರು ವರ್ಷಗಳ ಹಿಂದೆಯೇ ಈತ ಮೃತಪಟ್ಟಿದ್ದಾನೆ ಎಂದು ಅಪ್ಘಾನಿಸ್ತಾನ ಸರ್ಕಾರ ಹಾಗೂ ಅಲ್ಲಿನ ಗುಪ್ತಚರ ಮೂಲಗಳು ತಿಳಿಸಿವೆ. ಈ ಬಗ್ಗೆ ಹೆಚ್ಚಿನ ವಿಷಯಗಳು ಬಹಿರಂಗವಾಗಿಲ್ಲ.
ಮೊಹಮದ್ ಓಮರ್ ಸಾವಿನ ಬಗ್ಗೆ ಬಿಬಿಸಿ ತಾಲಿಬಾನ್ ಸಂಘಟನೆಯಿಂದ ಸ್ಪಷ್ಟನೆ ಕೇಳಿದ್ದು, ಈ ಬಗ್ಗೆ ಶೀಘ್ರವೇ ಅಧಿಕೃತ ಹೇಳಿಕೆ ನೀಡುವುದಾಗಿ ತಾಲಿಬಾನ್ ವಕ್ತಾರನೊಬ್ಬ ತಿಳಿಸಿದ್ದಾನೆ. ಈ ಹಿಂದೆಯೂ ತಾಲಿಬಾನ್ ಮುಖಂಡ ಮುಲ್ಲಾ ಮೊಹಮದ್ ಓಮರ್ ಮೃತಪಟ್ಟಿರುವ ಬಗ್ಗೆ ಅನೇಕ ವರದಿಗಳಾಗಿತ್ತು.