

ಲಾಹೋರ್ : ಕಾಶ್ಮೀರ ವಿಷಯ ಸೇರಿದಂತೆ ಎಲ್ಲಾ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ನೆರೆಹೊರೆಯವರಂತೆ ಸಹಬಾಳ್ವೆ ನಡೆಸಬೇಕು ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ವಿಷಯಕ್ಕೆ ಸಂಬಂಧಿಸಿದಂತೆ ಧೈರ್ಯವಾಗಿ ಹಾಗೂ ಮುಕ್ತವಾಗಿ ನಾನು ಮಾತನಾಡಿದ್ದೇನೆ. ಪಾಕ್ ಜೊತೆಗಿನ ಸಂಬಂಧ ಸುಧಾರಿಸಿಕೊಳ್ಳುವಂತೆ ಭಾರತಕ್ಕೆ ಪ್ರಸ್ತಾಪ ಮುಂದಿಟ್ಟಿದ್ದೇನೆ. ಕಾಶ್ಮೀರ ವಿಷಯ ಬಗೆಹರಿಸಿಕೊಳ್ಳುವಲ್ಲಿ ನಾವಿಬ್ಬರು ಉತ್ತಮ ನೆರೆಹೊರೆಯವರಂತೆ ಇರಬೇಕು ಎಂದು ನವಾಜ್ ಷರೀಪ್ ತಿಳಿಸಿದ್ದಾರೆ.
ಕಾಶ್ಮೀರ ವಿಷಯವಾಗಿ ವಿಶ್ವಸಂಸ್ಥೆಗೆ ಸತಯ ಸಂಗತಿಗಳನ್ನು ತಿಳಿಸಿದ್ದೇನೆ. ಈ ಸಂಬಂಧ ನಿರ್ಣಯ ಕೈಗೊಂಡು ಅದನ್ನು ಅನುಷ್ಠಾನಗೊಳಿಸುವುದು ವಿಶ್ವಸಂಸ್ಥೆಯ ಕರ್ತವ್ಯ ಎಂದು ಹೇಳಿದ್ದಾರೆ.
ಕಳೆದ ವಾರ ವಿಶ್ವಸಂಸ್ಥೆಯಲ್ಲಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ನವಾಜ್ ಷರೀಫ್ ಪಾಕಿಸ್ತಾನದ ಜೊತೆಗೆ ಭಾರತದ ಸಂಬಂಧ ವೃದ್ದಿಮಾಡಲು ನಾಲ್ಕು ಅಂಶಗಳನ್ನೊಳಗೊಂಡ ಫಾರ್ಮುಲಾ ನೀಡಿದ್ದರು.