ದೆಹಲಿ- ಸ್ಯಾನ್ ಫ್ರಾನ್ಸಿಸ್ಕೋಗೆ ನೇರ ವಿಮಾನ ಸೌಲಭ್ಯ ಘೋಷಿಸಿದ ಮೋದಿ

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ನವದೆಹಲಿ- ಸ್ಯಾನ್ ಫ್ರಾನ್ಸಿಸ್ಕೊ ನಡುವೆ ನೇರ ವಿಮಾನ ಸೌಲಭ್ಯವನ್ನು ಘೋಷಿಸಿದ್ದಾರೆ.
ಏರ್ ಇಂಡಿಯಾ
ಏರ್ ಇಂಡಿಯಾ

ಸ್ಯಾನ್ ಜೋಸ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ನವದೆಹಲಿ- ಸ್ಯಾನ್ ಫ್ರಾನ್ಸಿಸ್ಕೊ ನಡುವೆ ನೇರ ವಿಮಾನ ಸೌಲಭ್ಯವನ್ನು ಘೋಷಿಸಿದ್ದಾರೆ.
ವಾರದಲ್ಲಿ ಮೂರು ದಿನ ನೇರ ಸಂಪರ್ಕ ಕಲ್ಪಿಸುವ ವಿಮಾನ ಸೌಲಭ್ಯ ಇರಲಿದ್ದು, ಡಿ.2 ರಿಂದ ಅಸ್ತಿತ್ವಕ್ಕೆ ಬರಲಿದೆ. ಏರ್ ಇಂಡಿಯಾ ವಿಮಾನ ಪ್ರತಿ ವಾರದಲ್ಲಿ ಮೂರು ದಿನ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣಿಸಲಿದೆ.  ಎಸ್ ಎಪಿ ಸೆಂಟರ್ ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ನಂತರ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ.
ಸುಮಾರು ಒಂದು ಗಂಟೆಯ ಭಾಷಣ ಮುಕ್ತಾಯಗೊಂಡ ನಂತರ ಈ ವಿಷಯವನ್ನು ಘೋಷಣೆ ಮಾಡುವುದಕ್ಕಾಗಿಯೇ ಪ್ರಧಾನಿ ಮೋದಿ ಮತ್ತೊಮ್ಮೆ ವೇದಿಕೆಗೆ ಬಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com