

ಇಸ್ಲಮಾಬಾದ್: ಕಣಿವೆ ರಾಜ್ಯ ಕಾಶ್ಮಿರದಲ್ಲಿ ಸಮಸ್ಯೆಯಿಂದ ಜನರ ಗಮನ ಬೇರೆಡೆ ತಿರುಗಿಸುವ ಸಲುವಾಗಿ ಪ್ರಧಾನಿ ಮೋದಿ ಬಲೂಚಿಸ್ತಾನ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.
ಭಯೋತ್ಪಾದನೆಗೆ ಪಾಕಿಸ್ತಾನ ಉತ್ತೇಜನ ನೀಡುತ್ತಿದೆ ಎಂದು ಹೇಳುವ ಮೋದಿ ಅದನ್ನು ಸಾಬೀತು ಪಡಿಸಲಿ ಎಂದ್ ಪಾಕಿಸ್ತಾನ ವಿದೇಶ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್, ಬಲೂಚಿಸ್ತಾನದ ಪರಿಸ್ಥಿತಿ ಕಾಶ್ಮೀರದಷ್ಟು ಹದಗೆಟ್ಟಿಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಘೋರ ದುರಂತಗಳಿಂದ ಪ್ರಪಂಚದ ಗಮನವನ್ನು ಬೇರೆಡೆ ತಿರುಗಿಸಲು ಮೋದಿ ಪ್ರಯತ್ನಿಸಿ ಬಲೂಚಿಸ್ತಾನ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ 5 ವಾರಗಳಿಂದ ಕಾಶ್ಮೀರ ಜನರ ನೆಮ್ಮದಿ ಹಾಳಾಗಿದೆ ಎಂದು ಅವರು ಹೇಳಿದ್ದಾರೆ.
ಬಲೂಚಿಸ್ತಾನ ಪಾಕಿಸ್ತಾನ ಅವಿಭಾಜ್ಯ ಅಂಗ. ಭಾರತ ಪ್ರಮುಖ ಗುಪ್ತಚರ ಇಲಾಖೆಯಾದ 'ರಾ' ಬಲೂಚಿಸ್ತಾನದಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.