ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಹಾಕಿದ ಪಾಕ್ ಟಿವಿ ನಿರೂಪಕಿ!: ವಿಡಿಯೋ ವೈರಲ್

ಗಡಿಯಲ್ಲಿ ಪದೇ ಪದೇ ಕಾಲು ಕೆರೆದು ಭಾರತೀಯ ಸೈನಿಕರಿಂದ ಸತತವಾಗಿ ಪೆಟ್ಟು ತಿಂದ ಪಾಕಿಸ್ತಾನ ಬಹುಶಃ ಕಾಂಗಾಲಾಗಿರುವಂತೆ ಕಾಣುತ್ತಿದ್ದು, ಪಾಕ್ ವಾಹಿನಿಯ ನಿರೂಪಕಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರ ಬೆದರಿಕೆ ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಗಡಿಯಲ್ಲಿ ಪದೇ ಪದೇ ಕಾಲು ಕೆರೆದು ಭಾರತೀಯ ಸೈನಿಕರಿಂದ ಸತತವಾಗಿ ಪೆಟ್ಟು ತಿಂದ ಪಾಕಿಸ್ತಾನ ಬಹುಶಃ ಕಾಂಗಾಲಾಗಿರುವಂತೆ ಕಾಣುತ್ತಿದ್ದು, ಪಾಕ್ ವಾಹಿನಿಯ ನಿರೂಪಕಿಯೊಬ್ಬರು ಪ್ರಧಾನಿ ನರೇಂದ್ರ  ಮೋದಿ ಅವರಿಗೆ ನೇರ ಬೆದರಿಕೆ ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಖ್ಯಾತ ವಿಡಿಯೋ ಜಾಲತಾಣ ಯೂಟ್ಯೂಬ್ ನಲ್ಲಿ ಕಳೆದ ಡಿಸೆಂಬರ್ 7ರಂದು ವೈರಲ್ ಶಿಟ್ ಎಂಬ ಖಾತೆದಾರರು ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ವಿಡಿಯೋದಲ್ಲಿ ಪಾಕಿಸ್ತಾನದ ಓರ್ವ ನಿರೂಪಕಿ ಭಾರತ ಮತ್ತು ಪ್ರಧಾನಿ  ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ನೇರ ವಾಗ್ದಾಳಿ ಮಾಡಿದ್ದಾರೆ.



ಪ್ರಧಾನಿ ನರೇಂದ್ರ ಮೋದಿ ಕುರಿತು ವಾಗ್ದಾಳಿ ನಡೆಸಿರುವ ಟಿವಿ ನಿರೂಪಕಿ, "ಪದೇ ಪದೇ ಭಾರತ ಪಾಕಿಸ್ತಾನದೊಂದಿಗೆ ಕಾಲು ಕೆರೆದು ಪೆಟ್ಟು ತಿಂದಿದ್ದರೂ ಅದಕ್ಕೆ ಬುದ್ದಿ ಬಂದಂತೆ ಕಾಣುತ್ತಿಲ್ಲ. ಮಿಸ್ಟರ್ ಮೋದಿಯವರೇ ಬೆಂಕಿ  ಜೊತೆ ಆಟವಾಡಬೇಡಿ. ಇದ್ರಿಂದ ನೀವೇ ಸುಟ್ಟು ಹೋಗ್ತಿರಾ ಅಂತಾ ಅನೇಕ ಬಾರಿ ಸೂಚನೆ ನೀಡಿದ್ದೇವೆ. ಆದ್ರೂ ನಿಮಗೆ ಇದು ಅರ್ಥವಾಗ್ತಿಲ್ಲಾ. ನಮ್ಮ ಮಾತಿನಿಂದ ಗೊಂದಲಕ್ಕೊಳಗಾಗಬೇಡಿ. ಯಾವತ್ತೂ ಸ್ಫೋಟಕಗಳೊಂದಿಗೆ  ಆಟವಾಡಿದ್ದಲ್ಲಿ ನಾಶ ಕಟ್ಟಿಟ್ಟಬುತ್ತಿ. ಈ ವಿಚಾರವನ್ನ ನಿಮ್ಮ ನೆನಪಿನಲ್ಲಿಟ್ಟುಕೊಳ್ಳಿ. ಒಂದು ವೇಳೆ ನಾವು ಗಡಿ ದಾಟಲು ನಿರ್ಧಾರ ಮಾಡಿದ್ರೆ ನಿಮ್ಮ ಮಾನ ಉಳಿಯುವುದಿಲ್ಲ. ಹನುಮಾನ್, ಶಕ್ತಿಮಾನ್ ಕೂಡ ಇರಲ್ಲ ಎಂದು ನಿರೂಪಕಿ  ಕಿಡಿಕಾರಿದ್ದಾಳೆ.

ಬೆದರಿಕೆ ಹಾಕಿದ ನಿರೂಪಕಿ ಕುರಿತಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,  ವಿಡಿಯೋ ಅಪ್ಲೋಡ್ ಆದ ಕೇವಲ ಮೂರು ದಿನಗಳಲ್ಲಿ ಬರೊಬ್ಬರಿ 3  ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ನಿರೂಪಕಿ ಹೇಳಿಕೆಗೆ ಪರ-ವಿರೋಧ ಕಮೆಂಟ್ ಕೂಡ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com