ಚೀನಾದಿಂದ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಅಳವಡಿಕೆ: ಅಮೆರಿಕ ಚಿಂತಕರು

ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಿರ್ಮಿಸಿರುವ ಕೃತಕ ದ್ವೀಪಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಬಿಡುಗಡೆ ಮಾಡಿರುವ ಚೀನಾ ಸಮುದ್ರದ ವಿವಾದಾತ್ಮಕ ದ್ವೀಪದ ಚಿತ್ರ
ಅಮೆರಿಕ ಬಿಡುಗಡೆ ಮಾಡಿರುವ ಚೀನಾ ಸಮುದ್ರದ ವಿವಾದಾತ್ಮಕ ದ್ವೀಪದ ಚಿತ್ರ

ವಾಷಿಂಗ್ಟನ್: ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಿರ್ಮಿಸಿರುವ ಕೃತಕ ದ್ವೀಪಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿವಾದಿತ ದಕ್ಷಿಣ ಚೀನಾದಲ್ಲಿರುವ ಕೃತಕ ದ್ವೀಪಗಳಲ್ಲಿ ಚೀನಾ ಸೇನೆ ವಿಮಾನ ನಿರೋಧಕ ಬೃಹತ್ ಬಂದೂಕುಗಳನ್ನು ಮತ್ತು ಅತ್ಯಾಧುನಿಕ ಖಂಡಾಂತರ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಿದೆ. ಆ ಮೂಲಕ ಚೀನಾ ವಿವಾದಿತ  ಪ್ರದೇಶದ ಮೇಲೆ ತಮಗೆ ಮಾತ್ರ ಹಕ್ಕಿದೆ ಎಂದು ಪ್ರತಿಪಾದಿಸಲು ಹೊರಟಂತಿದೆ ಎಂದು ಅಮೆರಿಕದ ರಕ್ಷಣಾ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕ ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ವಿವಿಧ ದೇಶಗಳು ತಮ್ಮದು ಎಂದು ವಾದ ಮಂಡಿಸುತ್ತಿರುವ ಪ್ರದೇಶದಲ್ಲಿ ಚೀನಾ ಕೃತಕ ದ್ವೀಪಗಳನ್ನು ನಿರ್ಮಿಸಿದ್ದು, ದ್ವೀಪಗಳಲ್ಲಿ ಬೃಹತ್ ಮಿಲಿಟರಿ ಪಡೆಗಳನ್ನು ನಿಯೋಜಿಸಿದೆ.  ಅಷ್ಟು ಮಾತ್ರವಲ್ಲದೇ ವಾಯುದಾಳಿ ನಿರೋಧಕ ಕ್ಷಿಪಣಿ ವ್ಯವಸ್ಥೆ, ಅತ್ಯಾಧುನಿಕ ಯುದ್ಧ ವಿಮಾನಗಳು ಹಾಗೂ ಸಮರನೌಕೆಗಳನ್ನು ವಿವಾದಿತ ಸಮುದ್ರದಲ್ಲಿ ನಿಯೋಜಿಸಿದೆ. ಇದು ವಿಶ್ವಸಮುದಾಯದ ಆತಂಕಕ್ಕೆ ಕಾರಣವಾಗಿದೆ  ಎಂದು ಹೇಳಲಾಗುತ್ತಿದೆ.

ಅಮೆರಿಕ ರಕ್ಷಣಾ ತಜ್ಞರು ಬಿಡುಗಡೆ ಮಾಡಿರುವ ಸ್ಯಾಟಲೈಟ್ ಚಿತ್ರಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಚೀನಾ ನಿರ್ಮಿಸಿರುವ ಕೃತಕ ದ್ವೀಪಗಳಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ಗೋದಾಮುಗಳು, ಕ್ಷಿಪಣಿ ನಿಯಂತ್ರಕ  ವ್ಯವಸ್ಥೆಗಳು ಹಾಗೂ ವಿಮಾನ ನಿರೋಧಕ ಬೃಹತ್ ಬಂದೂಕುಗಳ ಅಳವಡಿಕೆ ಕಾರ್ಯಗಳು ನಡೆಯುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಅಂತೆಯೇ ವಿವಾದಿತ ದ್ವೀಪದಲ್ಲಿ ನಿರ್ಮಿಸಲಾಗಿರುವ ಬೃಹತ್ ಟವರ್ ಗಳಲ್ಲಿ  ಅತ್ಯಾಧುನಿಕ ರಾಡಾರ್ ವ್ಯವಸ್ಥೆ ಅಳವಡಿಸಲಾಗಿದ್ದು, ವಿವಾದಿತ ಸಮುದ್ರದಲ್ಲಿ ಚೀನಾ ಸರ್ಕಾರ ಯಾವ ಉದ್ದೇಶದಿಂದ ಈ ಕಾಮಗಾರಿಗಳನ್ನು ನಡೆಸುತ್ತಿವೆ ಎಂದು ಅಮೆರಿಕ ಚಿಂತಕರ ಚಾವಡಿ ಪ್ರಶ್ನಿಸಿದೆ.

ಇದೇ ವೇಳೆ ಚೀನಾ ನಡೆಯನ್ನು ತೀವ್ರವಾಗಿ ಟೀಕಿಸಿರುವ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್, ಚೀನಾದ ನಡವಳಿಕೆ ನಿಜಕ್ಕೂ ಬೇಸರ ತರಿಸಿದೆ. ಚೀನಾ ಇದೇ ರೀತಿ ತನ್ನ ನಡವಳಿಕೆಯನ್ನು  ಮುಂದುವರೆಸಿದರೆ ಚೀನಾ ವಿರುದ್ಧ ಭವಿಷ್ಯದಲ್ಲಿ ತಮ್ಮ ಸರ್ಕಾರ ಬರಾಕ್ ಒಬಾಮ ಆಡಳಿತಕ್ಕಿಂತ ಕಠಿಣ ನೀತಿಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಆದರೆ ಅಮೆರಿಕದ ಆರೋಪಗಳನ್ನು ನಿರಾಕರಿಸಿರುವ ಚೀನಾ, ತನ್ನ ಕೃತಕ ದ್ವೀಪಗಳಲ್ಲಿ ಅಂತಹ ಯಾವುದೇ ಮಿಲಿಟರಿ ಕಾಮಗಾರಿಗಳನ್ನು ನಡೆಸುತ್ತಿಲ್ಲ. ಬದಲಿಗೆ ರಕ್ಷಣಾ ಉದ್ದೇಶದಿಂದ ನಿಯಮಿತಿ ರಕ್ಷಣಾ ಕ್ರಮಗಳನ್ನು  ಕೈಗೊಂಡಿದ್ದೇವೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com