ಬಾಗ್ದಾದ್​ನಲ್ಲಿ ಅವಳಿ ಬಾಂಬ್ ಸ್ಫೋಟ, ಸಾವಿನ ಸಂಖ್ಯೆ 28ಕ್ಕೆ ಏರಿಕೆ

ಉಗ್ರರು ಸೆಂಟ್ರಲ್ ಬಾಗ್ದಾದ್ ನ ಮಾರುಕಟ್ಟೆ ಗುರಿಯಾಗಿಸಿಕೊಂಡು ಶನಿವಾರ ನಡೆಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 28 ಮಂದಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬಾಗ್ದಾದ್: ಉಗ್ರರು ಸೆಂಟ್ರಲ್ ಬಾಗ್ದಾದ್ ನ ಮಾರುಕಟ್ಟೆ ಗುರಿಯಾಗಿಸಿಕೊಂಡು ಶನಿವಾರ ನಡೆಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 28 ಮಂದಿ ಮೃತಪಟ್ಟಿದ್ದಾರೆ ಮತ್ತು 54ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗಿನ ಜಾವ ಕಾರುಗಳ ಬಿಡಿಭಾಗಗಳನ್ನೇ ಹೆಚ್ಚಾಗಿ ಮಾರಾಟಮಾಡುವ ಅಲ್-ಸಿನಾಕ್ ಮಾರುಕಟ್ಟೆ ಭಾಗದಲ್ಲಿ ಮೊದಲ ಬಾಂಬ್ ಸ್ಫೋಟಗೊಂಡಿದ್ದು, ಈ ಪ್ರದೇಶದಿಂದ ಸ್ವಲ್ಪ ದೂರದಲ್ಲಿರುವ ಪೋಸ್ಟ್ ಆಫೀಸ್ ಬಳಿ ಇನ್ನೊಂದು ಬಾಂಬ್ ಸ್ಪೋಟಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಅವಳಿ ಸ್ಫೋಟದ ಸ್ಫೋಟದ ಹೊಣೆಯನ್ನು ಇದುವರೆಗೂ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ ಆದರೆ ಇದು ಐಎಸ್ಐಎಸ್ ಕೃತ್ಯವಿರಬಹುದೆಂದು ಶಂಕಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com