ಬಾಂಗ್ಲಾದಲ್ಲಿ ಚೀನಾ ನಿರ್ಮಿಸಬೇಕಿದ್ದ ಬಂದರು ಯೋಜನೆ ಸ್ಥಗಿತ: ಹೊಸ ಒಪ್ಪಂದ ಭಾರತಕ್ಕೆ ಜಿಗಿತ?

ಉತ್ತಮಗೊಳ್ಳುತ್ತಿರುವ ಭಾರತ- ಬಾಂಗ್ಲಾ ದ್ವಿಪಕ್ಷೀಯ ಸಂಬಂಧ ಚೀನಾಕ್ಕೆ ಮತ್ತೊಂದು ಮರ್ಮಾಘಾತ ನೀಡಿದೆ.
ಬಂದರು ನಿರ್ಮಾಣಕ್ಕೆ ಭಾರತ- ಬಾಂಗ್ಲ ಹೊಸ ಒಪ್ಪಂದ ಸಾಧ್ಯತೆ
ಬಂದರು ನಿರ್ಮಾಣಕ್ಕೆ ಭಾರತ- ಬಾಂಗ್ಲ ಹೊಸ ಒಪ್ಪಂದ ಸಾಧ್ಯತೆ

ನವದೆಹಲಿ: ಉತ್ತಮಗೊಳ್ಳುತ್ತಿರುವ ಭಾರತ- ಬಾಂಗ್ಲಾ ದ್ವಿಪಕ್ಷೀಯ ಸಂಬಂಧ ಚೀನಾಕ್ಕೆ ಮತ್ತೊಂದು ಮರ್ಮಾಘಾತ ನೀಡಿದೆ. ಚೀನಾ ಬಾಂಗ್ಲಾದೇಶದಲ್ಲಿ ನಿರ್ಮಿಸಬೇಕಿದ್ದ ಸಮುದ್ರ ಬಂದರು ಯೋಜನೆಯೊಂದನ್ನು ರದ್ದುಗೊಳಿಸಿರುವ ಬಾಂಗ್ಲಾದೇಶ, ಅಂಥದ್ದೆ ಮತ್ತೊಂದು ಯೋಜನೆಗಾಗಿ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ ಎಂಬ ವರದಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ  ಭಾರತ ಸರ್ಕಾರ ಬಾಂಗ್ಲಾದಲ್ಲಿ ಪೈರಾ ಸಮುದ್ರ ಬಂದರು ನಿರ್ಮಾಣ ಮಾಡಲು ಉತ್ಸಾಹ ತೋರಿದ್ದು ಈ ಸಂಬಂಧ ಬಾಂಗ್ಲಾದೇಶ ಹಾಗೂ ಭಾರತದ ನಡುವೆ ಒಪ್ಪಂದ ನಡೆಯಲಿದೆ. ಒಪ್ಪಂದ ಯಶಸ್ವಿಯಾದರೆ ಭಾರತ-ಬಾಂಗ್ಲಾದೇಶದ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಯಾಗುವ ನಿರೀಕ್ಷೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದೇ ವೇಳೆ ಚೀನಾಕ್ಕೆ ಪೈಪೋಟಿ ನೀಡುವಂತೆ ಚೀನಾದಿಂದ ನಿರ್ಮಾಣವಾಗಬೇಕಿದ್ದ ಮತ್ತೊಂದು ಯೋಜನೆಯನ್ನು ಜಪಾನ್ ತನ್ನತ್ತ ಸೆಳೆದುಕೊಂದಿದ್ದು ಬಾಂಗ್ಲಾದೇಶದ ಕಾಕ್ಸ್ ಬಜಾರ್ ನಲ್ಲಿ ಮತ್ತೊಂದು ಬಂದರು ನಿರ್ಮಿಸಿಕೊಡಲಿದೆ. ಏಷ್ಯಾದ ಎರಡು ಮಿತ್ರ ರಾಷ್ಟ್ರಗಳು ಒಗ್ಗೂಡಿ ಬಾಂಗ್ಲಾದೇಶದಲ್ಲಿ ಬಂದರು ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳುತ್ತಿರುವುದು ಹಿಂದೂ ಮಹಾಸಾಗರದಲ್ಲಿ ಪ್ರಾಬಲ್ಯವನ್ನು ಹೆಚ್ಚಿಸಿ ಭಾರತವನ್ನು ಸುತ್ತುವರಿಯಲು ಚೀನಾ ರೂಪಿಸಿದ್ದ ಬಹುಚರ್ಚಿತ ಸ್ಟ್ರಿಂಗ್ ಆಫ್ ಪರ್ಲ್ಸ್ ನ ಕಾರ್ಯತಂತ್ರಕ್ಕೆ ದೊಡ್ಡ ಹಿನ್ನಡೆಯುಂಟುಮಾಡಿದಂತಾಗುತ್ತದೆ.
ಪೈರಾ ಸಮುದ್ರ ಬಂದರು ಬಾಂಗ್ಲಾದ ನೈಋತ್ಯ ಭಾಗದಲ್ಲಿದ್ದು ಭಾರತೀಯ ಕರಾವಳಿ ಪ್ರದೇಶಕ್ಕೆ ಹತ್ತಿರವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com