ಭಾರತ ನಿಲುವಿಗೆ ಟೀಕೆ: ಫೇಸ್‌ಬುಕ್ ನಿರ್ದೇಶಕನನ್ನು ತರಾಟೆಗೆ ತೆಗೆದುಕೊಂಡ ಝುಕರ್ ಬರ್ಗ್
ಭಾರತ ನಿಲುವಿಗೆ ಟೀಕೆ: ಫೇಸ್‌ಬುಕ್ ನಿರ್ದೇಶಕನನ್ನು ತರಾಟೆಗೆ ತೆಗೆದುಕೊಂಡ ಝುಕರ್ ಬರ್ಗ್

ಭಾರತ ನಿಲುವಿಗೆ ಟೀಕೆ: ಫೇಸ್‌ಬುಕ್ ನಿರ್ದೇಶಕನನ್ನು ತರಾಟೆಗೆ ತೆಗೆದುಕೊಂಡ ಝುಕರ್ ಬರ್ಗ್

ನೆಟ್ ನ್ಯೂಟ್ರಾಲಿಟಿ ಬಗ್ಗೆ ಭಾರತೆ ತಳೆದಿರುವ ನಿಲುವನ್ನು ಕಟುವಾಗಿ ಟೀಕಿಸಿದ್ದ ಫೇಸ್‌ಬುಕ್ ನಿರ್ದೇಶಕ ಮಾರ್ಕ್ ಆ್ಯಂಡ್ರೀಸನ್ ಅವರನ್ನು ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ...

ನ್ಯೂಯಾರ್ಕ್: ನೆಟ್ ನ್ಯೂಟ್ರಾಲಿಟಿ ಬಗ್ಗೆ ಭಾರತೆ ತಳೆದಿರುವ ನಿಲುವನ್ನು ಕಟುವಾಗಿ ಟೀಕಿಸಿದ್ದ ಫೇಸ್‌ಬುಕ್ ನಿರ್ದೇಶಕ ಮಾರ್ಕ್ ಆ್ಯಂಡ್ರೀಸನ್ ಅವರನ್ನು ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತ ಸರ್ಕಾರ ನೆಟ್ ನ್ಯೂಟ್ರಾಲಿಟಿ ಪರವಾಗಿ ನಿರ್ಧಾರ ಕೈಗೊಂಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ  ಫೇಸ್‌ಬುಕ್ ನ ನಿರ್ದೇಶಕ ಮಾರ್ಕ್ ಆ್ಯಂಡ್ರೀಸನ್ ಅವರು, ನಿನ್ನೆ ಭಾರತದ ನಿಲುವನ್ನು ಟೀಕಿಸಿ ಅವಮಾನವಾಗುವಂತೆ ಟ್ವೀಟ್ ಒಂದನ್ನು ಮಾಡಿದ್ದರು. ಟ್ವೀಟ್ ನಲ್ಲಿ ಭಾರತವು ಬ್ರಿಟೀಷ್ ಆಡಳಿತದಲ್ಲೇ ಇದ್ದಿದ್ದರೆ ಉತ್ತಮವಾಗಿತ್ತು. ತಾರತಮ್ಯದ ಇಂಟರ್ನೆಟ್ ದರಕ್ಕೆ ಭಾರತ ವಿರೋಧ ವ್ಯಕ್ತಪಡಿಸಿರುವುದು ಕೊಲೊನಿಯಲಿಸ್ಟ ವಿರೋಧಿ. ಭಾರತೀಯರು ಮತ್ತೊಮ್ಮೆ ಆರ್ಥಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿಕೊಂಡಿದ್ದರು. ಆ್ಯಂಡ್ರಿಸನ್ ಅವರ ಈ ಟ್ವೀಟ್ ಗೆ ಹಲವಾರು ಭಾರತೀಯರು ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ಈ ಟ್ವೀಟ್ ನ್ನು ಮಾರ್ಕ್ ಝುಕರ್ ಬರ್ಗ್ ಕೂಡ ವಿರೋಧ ವ್ಯಕ್ತಪಡಿಸಿದ್ದು, ಆ್ಯಂಡ್ರಿಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆ್ಯಂಡ್ರೀಸನ್ ಅವರ ಈ ರೀತಿಯ ಟ್ವೀಟ್ ನಿಜಕ್ಕೂ ಬೇಸರವನ್ನುಂಟುಮಾಡಿದೆ. ಫೇಸ್ ಬುಕ್ ಈ ರೀತಿಯಾಗಿ ಪ್ರಸ್ತುತ ಪಡಿಸುವುದನ್ನು ಒಪ್ಪಿಕೊಳ್ಳುವುದಿಲ್ಲ. ವೈಯಕ್ತಿಕವಾಗಿ ಭಾರತ ನನಗೆ ಪ್ರಮುಖವಾಗಿದೆ. ಭಾರತಕ್ಕೆ ಪ್ರವಾಸಕ್ಕೆಂದು ಹೋದಾಗ ಅಲ್ಲಿನ ಮಾನವೀಯತೆ ನನಗೆ ಬಹಳ ಇಷ್ಟವಾಗಿತ್ತು. ಅವರ ಆತ್ಮವಿಶ್ವಾಸ ಹಾಗೂ ಮೌಲ್ಯಗಳು ಇಷ್ಟವಾಯಿತು. ಪ್ರತಿಯೊಬ್ಬರಿಗೂ ಅವರ ಅನಿಸಿಕೆ ವ್ಯಕ್ತಪಡಿಸುವ ಹಕ್ಕಿದೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com