

ಬೀಜಿಂಗ್: ಈಶಾನ್ಯ ಚೀನಾದಲ್ಲಿ ಶನಿವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4ರ ತೀವ್ರತೆ ದಾಖಲಾಗಿದೆ.
ಈಶಾನ್ಯ ಚೀನಾದ ಹೆಲಾಂಗ್ ಜಿಯಾಂಗ್ ಪ್ರಾಂತ್ಯದ ಲಿಂಕೋನಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಸ್ಥಳೀಯ ಕಾಲಮಾನ ಬೆಳಗ್ಗೆ 12.22ರಲ್ಲಿ ಸುಮಾರು 580 ಕಿ.ಮೀ ಭೂಮಿಯ ಆಳದಲ್ಲಿ ಕಂಪನ ಸಂಭವಿಸಿದೆ. ಪ್ರಸ್ತುತ ಬಂದಿರುವ ವರದಿಗಳ ಪ್ರಕಾರ ಕಂಪನದಿಂದಾಗಿ ಉಂಟಾದ ಸಾವುನೋವಿನ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ.
ಮುಂಜಾಗ್ರತಾ ಕ್ರಮವಾಗಿ ಹೆಲಾಂಗ್ ಜಿಯಾಂಗ್ ಪ್ರಾಂತ್ಯದಲ್ಲಿ ಸಂಚರಿಸುವ 3 ರೈಲುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹರ್ಬಿನ್ ರೈಲ್ವೇ ಬ್ಯೂರೋ ತಿಳಿಸಿದೆ.