

ನ್ಯೂಯಾರ್ಕ್: ದರೋಡೆ ಮಾಡಿದ್ದಾನೆ ಎಂಬ ಆರೋಪಕ್ಕೆ ಒಳಗಾಗಿರುವ ೧೮ ವರ್ಷದ ಯುವಕ ಸಂತ್ರಸ್ತರೊಬ್ಬರೊಂದಿಗೆ ಸೆಲ್ಫಿ ತೆಗಿಸಿಕೊಂಡು ಅದನ್ನು ಹಂಚಿಕೊಂಡಿದ್ದರಿಂದ ಜೈಲು ಸೇರಿದ್ದಾನೆ.
ವಿಕ್ಟರ್ ಅಲ್ಮಾಂಜಾ-ಮಾರ್ಟಿನೆಜ್ ಎಂಬುವವನನ್ನು ಪೊಲೀಸರು ಬಂಧಿಸಿದ್ದು ಈ ದರೋಡೆಯಲ್ಲಿ ಭಾಗಿಯಾಗಿದ್ದ ಇನ್ನಿಬ್ಬರನ್ನು ಕ್ಯಾಲಿಫೋರ್ನಿಯಾ ಪೊಲೀಸರು ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ನೀಡಿರುವ ವರದಿಯ ಪ್ರಕಾರ ಅಲ್ಮಾಂಜಾ ಮತ್ತಿಬ್ಬರು ಬುಧವಾರ ನಾಲ್ಕು ಜನರ ಬಳಿಹೋಗಿ ಕಾರನ್ನು ಒಳಗೊಂಡಂತೆ ಅವರ ವಸ್ತುಗಳನ್ನೆಲ್ಲಾ ದೋಚಿದ್ದಾರೆ. ನಂತರ ಅಲ್ಲಿಂದ ತೆರಳುವ ಮೊದಲು ನಾಲ್ವರಲ್ಲಿ ಒಬ್ಬಳ ಜೊತೆ ಸೆಲ್ಫಿ ತೆಗಿಸಿಕೊಂಡು ಹಂಚಿಕೊಂಡಿದ್ದಾನೆ.
ಈ ಸೆಲ್ಫಿಯ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸಲು ಸಫಲರಾಗಿದ್ದಾರೆ.