ನವದೆಹಲಿ/ತಿರುವನಂತಪುರ: ಕೇರಳದ ಮೀನುಗಾರರ ಹತ್ಯೆ ನಡೆಸಿದ ಇಟಲಿಯ ನೌಕಾಪಡೆ ಸಿಬ್ಬಂದಿ ಮಸ್ಸಿಮಿಲಾನಿಯೋ ಲಾಟ್ಟೊರೆ ಇಟಲಿಯಲ್ಲಿ ನೆಲೆಸುವ ಅವಧಿಯನ್ನು ಏ.30ರ ವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ಅವಧಿ ಬುಧವಾರಕ್ಕೆ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಕೋರ್ಟಲ್ಲಿ ವಿಚಾರಣೆಗೆ ಬಂದಿತ್ತು.
ಲಾಟ್ಟೊರೆಯನ್ನು ಭಾರತಕ್ಕೆ ಕಳುಹಿಸಲಾಗುವುದಿಲ್ಲ ಎಂದು ಇಟಲಿ ಸರ್ಕಾರ ಹೇಳಿದೆ ಎಂಬ ಬಗ್ಗೆ ನ್ಯಾ.ಎ.ಆರ್.ದವೆ, ನ್ಯಾ.ಕುರಿಯನ್ ಜೋಸೆಫ್ ಮತ್ತು ನ್ಯಾ.ಅಮಿತಾವಾ ರಾಯ್ ನೇತೃತ್ವದ ಪೀಠ ನೌಕಾ ಸಿಬ್ಬಂದಿ ಪರ ವಕೀಲ ಸೋಲಿ ಸೊರಾಬ್ಜಿಯವರನ್ನು ಪ್ರಶ್ನಿಸಿತು.
ಇದೊಂದು ಆಧಾರ ರಹಿತ ಎಂದು ಅವರು ಹೇಳಿದರು. ನೌಕಾ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇರಳ ಸರ್ಕಾರ ಒತ್ತಾಯಿಸಿದೆ.