

ನ್ಯೂಯಾರ್ಕ್: ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಕಂಪನಿಯಲ್ಲಿ ತಾನು ಹೊಂದಿರುವ ಷೇರುಗಳಲ್ಲಿ ಶೇ.99ರಷ್ಟನ್ನು ಸಮಾಜ ಸೇವೆಗೆ ಕೊಡುಗೆ ನೀಡಿದ ಬೆನ್ನಲ್ಲೇ ಅದೇ ಕಂಪನಿಯ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿರುವ ಶೆರಿಲ್ ಸ್ಯಾಂಡ್‍ಬರ್ಗ್ ಸಹ ಇದೇ ಹಾದಿಯಲ್ಲಿ ಸಾಗಿದ್ದಾರೆ.
ಶೆರಿಲ್ ಕಂಪನಿಯಲ್ಲಿ ಹೊಂದಿರುವ ಷೇರುಗಳ ಪೈಕಿ 2.90 ಲಕ್ಷ ಷೇರುಗಳನ್ನು ಸಮಾಜ ಸೇವೆಗೆ ಕೊಡುಗೆಯಾಗಿ ನೀಡಿದ್ದಾರೆ. ಈಗಿನ ಮಾರುಕಟ್ಟೆ ದರದಲ್ಲಿ ಈ ಷೇರುಗಳ ಮೌಲ್ಯ 31 ದಶಲಕ್ಷ ಡಾಲರ್‍ಗಳಾಗಲಿವೆ. ಶೆರಿಲ್ ಅವರ ಹೆಸರಿನಲ್ಲೇ ಸಮಾಜಸೇವಾ ನಿಧಿ ಇದ್ದು ಈ ಷೇರುಗಳನ್ನು ಸಂಸ್ಥೆಗೆ ವರ್ಗಾಯಿಸಿದ್ದಾರೆ. ಈ ಸಂಸ್ಥೆ ಈಗಾಗಲೆ ಸಮಾಜ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.