ಬ್ರೆಕ್ಸಿಟ್ ನಿಲುವು: ಭಾರತವನ್ನು ಕೊಂಡಾಡಿದ ಬ್ರಿಟನ್ ಪ್ರಧಾನಿ ಕೆಮರಾನ್

ಇಡೀ ವಿಶ್ವಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಬ್ರೆಕ್ಸಿಟ್ ಮತದಾನನ್ನಿ ಬ್ರಿಟನ್ ಯೂರೋಪಿಯನ್ ಒಕ್ಕೂಟದಿಂದ ಹೊರಬಂದ ಬಳಿಕ ಇದೇ ಮೊದಲ ಬಾರಿಗೆ ಸಂಸತ್ ನಲ್ಲಿ ಈ ಬಗ್ಗೆ ಮಾತನಾಡಿರುವ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಭಾರತವನ್ನು ಕೊಂಡಾಡಿದ್ದಾರೆ...
ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ (ಸಂಗ್ರಹ ಚಿತ್ರ)
ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ (ಸಂಗ್ರಹ ಚಿತ್ರ)

ಲಂಡನ್: ಇಡೀ ವಿಶ್ವಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಬ್ರೆಕ್ಸಿಟ್ ಮತದಾನನ್ನಿ ಬ್ರಿಟನ್ ಯೂರೋಪಿಯನ್ ಒಕ್ಕೂಟದಿಂದ ಹೊರಬಂದ ಬಳಿಕ ಇದೇ ಮೊದಲ ಬಾರಿಗೆ ಸಂಸತ್ ನಲ್ಲಿ ಈ  ಬಗ್ಗೆ ಮಾತನಾಡಿರುವ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಭಾರತವನ್ನು ಕೊಂಡಾಡಿದ್ದಾರೆ.

ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವುದರ ವಿರುದ್ಧ ವಿರೋಧ ವ್ಯಕ್ತಪಡಿಸಿ ಅಭಿಯಾನವನ್ನೇ ನಡೆಸಿದ್ದ ಡೇವಿಡ್ ಕೆಮರಾನ್ ಇದೇ ಮೊದಲ ಬಾರಿಗೆ ಬ್ರೆಕ್ಸಿಟ್ ಮತದಾನದ  ಫಲಿತಾಂಶದ ಕುರಿತು ಬ್ರಿಟನ್ ಸಂಸತ್ ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಬ್ರಿಟನ್ ಯೂರೋಪಿಯನ್ ಒಕ್ಕೂಟದೊಂದಿಗಿನ ಸಂಬಂಧ ಅವಿನಾಭಾವದಾದ್ದಾಗಿದ್ದು, ಈ ಸೌಹಾರ್ಧಯುತ  ಸಂಬಂಧವನ್ನು ಎಂದಿಗೂ ಕಡಿದುಕೊಳ್ಳಲು ಇಚ್ಛಿಸುವುದಿಲ್ಲ. ತಮ್ಮ ನಿರ್ಗಮನದ ಬಳಿಕ ಅಧಿಕಾರಕ್ಕೇರುವ ನೂತನ ಪ್ರಧಾನಿ ಕೂಡ ಯೂರೋಪಿಯನ್ ಒಕ್ಕೂಟದ ದೇಶಗಳೊಂದಿಗಿನ  ಸ್ನೇಹವನ್ನು ಮುಂದುವರೆಸುತ್ತಾರೆ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದರು.

ಅಂತೆಯೇ ಇದೇ ವೇಳೆ ಬ್ರೆಕ್ಸಿಟ್ ಮತದಾನ ಕುರಿತಂತೆ ಭಾರತದ ನಿಲುವನ್ನು ಪ್ರಶಂಸಿದ ಕೆಮರಾನ್, ಬ್ರಿಟನ್ ನ ಅತ್ಯಾಪ್ತ ರಾಷ್ಟ್ರಗಳಲ್ಲಿ ಲ್ಯಾಟಿನ್ ಅಮೆರಿಕ ರಾಷ್ಟ್ರಗಳು ಸೇರಿದಂತೆ ಭಾರತ  ಕೂಡ ಒಂದಾಗಿದೆ. ಮುಂದಿನ ಪ್ರಧಾನಿ ಯೂರೋಪಿಯನ್ ಒಕ್ಕೂಟದೊಂದಿಗೆ ನಮಗಿದ್ದ ಉತ್ತಮ ವಾಣಿಜ್ಯಸ ಸೌಹಾರ್ಧ ಸಂಬಂಧವನ್ನು ಮುಂದುವರೆಸಲಿದ್ದಾರೆ. ಕಾಮನ್ ವೆಲ್ತ್ ಒಕ್ಕೂಟದ  ಪ್ರಮುಖ ಪಾಲುದಾರ ರಾಷ್ಟ್ರಗಳಾದ ಉತ್ತರ ಅಮೆರಿಕ, ಚೀನಾ ಮತ್ತು ಭಾರತದ ಸ್ನೇಹ ಬ್ರಿಟನ್ ಗೆ ಪ್ರಮುಖವಾಗಿದ್ದು, ಎಂದಿನಂತೆ ಭಾರತ ನಮ್ಮ ಆಪ್ತರಾಷ್ಟ್ರಗಳ ಪಟ್ಟಿಯಲ್ಲೇ  ಮುಂದುವರೆಯಲಿದೆ ಎಂದು ಹೇಳಿದರು.

ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರ ಉಳಿಯುತ್ತಿರ ಬಹುದು. ಆದರೆ ನಾವು ನಮ್ಮ ಐರೋಪ್ಯ ಒಕ್ಕೂಟದ ಸ್ನೇಹ-ಸಂಬಂಧವನ್ನು ಕಡಿತಗೊಳಿಸಬಾರದು, ಐರೋಪ್ಯ  ಒಕ್ಕೂಟದೊಂದಿಗೆ ಈವರೆಗೆ ಇದ್ದ ಸಂಬಂಧವನ್ನೇ ಮುಂದುವರೆಸಲು ನಾವು ಬಯಸಿದ್ದೇವೆ. ಐರೋಪ್ಯ ಒಕ್ಕೂಟದಿಂದ ಹೊರಹೋಗಲು ತಮಗಿಷ್ಟವಿಲ್ಲ. ಆದರೆ ಪ್ರಜೆಗಳ ತೀರ್ಮಾನವನ್ನು  ಗೌರವಿಸಲೇಬೇಕು. ಅಂತೆಯೇ ದೇಶದಲ್ಲಿನ ಅಪರಾಧ ಚಟುವಟಿಕೆಗಳು ಕಡಿಮೆಯಾಗಬೇಕು ಮತ್ತು ವಿದೇಶಿಗರ ಮೇಲಿನ ಹಲ್ಲೆ ಕೂಡಲೇ ನಿಲ್ಲಬೇಕು ಎಂದು ಕೆಮರಾನ್ ಆಗ್ರಹಿಸಿದರು.

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದಿರುವುದರಿಂದ ಪ್ರಜೆಗಳ ಹಕ್ಕುಗಳಲ್ಲಿ ಯಾವುದೇ ತುರ್ತು ಬದಲಾವಣೆಗಳಿರುವುದಿಲ್ಲ ಎಂದು ಕೆಮರಾನ್ ಆಶ್ವಾಸನೆ ನೀಡಿದರು.  ಒಕ್ಕೂಟದೊಂದಿಗಿನ ವಾಣಿಜ್ಯ ಸಂಬಂಧವನ್ನು ಕಡಿತಗೊಳಿಸುವ ಪ್ರಕ್ರಿಯೆ ನೂತನ ಪ್ರಧಾನಿಗಳಿಂದಲೇ ಆರಂಭವಾಗುತ್ತದೆ. ಹೀಗಾಗಿ ನಾಗರಿಕ ಸೇವೆಗಳು ಇದಕ್ಕಾಗಿ ಈಗಿನಿಂದಲೇ ಸಿದ್ಧತೆ  ಆರಂಭಿಸಬೇಕು ಎಂದು ಕೆಮರಾನ್ ಹೇಳಿದರು.

ಐರೋಪ್ಯಾ ಒಕ್ಕೂಟದಿಂದ ಬ್ರಿಟನ್ ಹೊರಬಂದ ಹಿನ್ನಲೆಯಲ್ಲಿ ಡೇವಿಡ್ ಕೆಮರಾನ್ ಅವರ ಈ ಭಾಷಣವನ್ನು ಅವರ ವಿದಾಯದ ಭಾಷಣ ಎಂದೇ ಬಿಂಬಿಸಲಾಗುತ್ತಿದೆ. ಇದೇ ಸೆಪ್ಟೆಂಬರ್  2ರಂದು ಕೆಮರಾನ್ ತಮ್ಮ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com