

ಚೀನಾ: ಐ ಫೋನ್ ಖರೀದಿಸುವ ಆಸೆಗೆ ಬಿದ್ದ ತಂದೆಯೊಬ್ಬ ಹಣಕ್ಕಾಗಿ ತನ್ನ 18 ದಿನದ ಮಗುವನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಿ ಜೈಲು ಸೇರಿರುವ ಘಟನೆ ಆಗ್ನೇಯ ಚೀನಾದ ಫ್ಯೂಜಿಯಾನ್ ಪ್ರದೇಶದ ತಾಂಗ್ ಎನ್ ಎಂಬಲ್ಲಿ ನಡೆದಿದೆ.
ಅ ದೌನ್ ಎಂಬ ವ್ಯಕ್ತಿ ತನ್ನ 18 ದಿನದ ಮಗುವನ್ನು ಆನ್ ಲೈನ್ ಮಾರಾಟಕ್ಕಿಟ್ಟಿದ್ದ. ಈ ಮಗುವನ್ನು ವ್ಯಕ್ತಿಯೊಬ್ಬರು ಖರೀದಿಸಿ. ಹಸುಗೂಸನ್ನು ತಮ್ಮ ಸಹೋದರಿ ಬಳಿ ಬಿಟ್ಟಿದ್ದರು. ಈ ವೇಳೆ ಖರೀದಿ ಮಾಡಿದ್ದ ವ್ಯಕ್ತಿಯ ಸಹೋದರಿ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾಳೆ.
ಅ ದೌನ್ ಮತ್ತು ಆಕೆಯ ಪತ್ನಿ ಇಬ್ಬರು 19 ವರ್ಷದವರಾಗಿದ್ದಾರೆ. ಇಬ್ಬರಿಗೂ ಮಗು ಬೇಡವಾಗಿತ್ತು. ಆಕೆ ಪಾರ್ಟ್ ಟೈಮ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಮಗುವನ್ನು ಸಾಕಲು ಶಕ್ತರಲ್ಲದ ಕಾರಣ ಮಾರಾಟ ಮಾಡಿದ್ದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.
ಇನ್ನು ಹಸುಗೂಸನ್ನು ಅಕ್ರಮವಾಗಿ ಮಾರಾಟ ಮಾಡಿದ್ದಕ್ಕೆ ತಂದೆಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ