ಕ್ಯೂಬಾ-ಅಮೆರಿಕ ನಡುವೆ ನೇರ ಸಂಚಾರ ಸೌಲಭ್ಯ ಪುನಾರಂಭ

ಅಮೆರಿಕ- ಕ್ಯೂಬಾ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಮಹತ್ವದ ಬೆಳವಣಿಗೆಯ ಭಾಗವಾಗಿ ಉಭಯ ರಾಷ್ಟ್ರಗಳ ನಡುವೆ ನೇರ ಸಂಚಾರ ಸೌಲಭ್ಯ ಪುನಾರಂಭಗೊಂಡಿದೆ.
ಅಮೆರಿಕ- ಕ್ಯೂಬಾ
ಅಮೆರಿಕ- ಕ್ಯೂಬಾ
Updated on: 

ಹವಾನಾ: ಅಮೆರಿಕ- ಕ್ಯೂಬಾ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಮಹತ್ವದ ಬೆಳವಣಿಗೆಯ ಭಾಗವಾಗಿ ಉಭಯ ರಾಷ್ಟ್ರಗಳ ನಡುವೆ ನೇರ ಸಂಚಾರ ಸೌಲಭ್ಯ ಪುನಾರಂಭಗೊಂಡಿದೆ.

ಕ್ಯೂಬಾದ ಖಾಸಗಿ ಸಂಸ್ಥೆಯೊಂದು ಉಭಯ ದೇಶಗಳ ನಡುವೆ ನೇರ ವಿಮಾನ ಸಂಚಾರ ಸೌಲಭ್ಯ ಪುನಾರಂಭಗೊಂಡಿರುವುದನ್ನು ಸ್ಪಷ್ಟಪಡಿಸಿದೆ.  ತಾಂತ್ರಿಕ, ಕಾರ್ಯಾಚರಣೆಯ ಮತ್ತು ಸುರಕ್ಷತೆ ವಿವರಗಳನ್ನು ಪರಿಶೀಲನೆ ನಡೆಸಿದ ನಂತರ ಅಮೆರಿಕ- ಕ್ಯೂಬಾದ ನಡುವೆ ನೇರ ಸಂಚಾರ ಸೌಲಭ್ಯ ಪುನಾರಂಭ ಮಾಡಲಾಗಿದೆ. ಮಾ.16 ರಂದು ಮೊದಲ ಬಾರಿಗೆ ನೇರ ವಿಮಾನ ಸಂಚಾರ ಪ್ರಾರಂಭವಾಗಿದೆ.

ನೇರ ಸಂಚಾರ ಸೌಲಭ್ಯ ಸಾಧ್ಯವಾಗಿರುವುದರಿಂದ ಉಭಯ ದೇಶಗಳ ನಡುವೆ ಸರಕು ಸಾಗಣೆಗೆ ಅನುಕೂಲವಾಗಲಿದೆ. ನೇರ ಸಂಚಾರ ಪ್ರಾರಂಭಿಸಲು ಅಮೆರಿಕ- ಕ್ಯೂಬಾ 2015 ರ ಡಿ.11 ರಂದು  ಒಪ್ಪಂದ ಮಾಡಿಕೊಂಡಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com