ಕ್ಯೂಬಾ ಗೆ ಭೇಟಿ ನೀಡಿದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ

ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಕ್ಯೂಬಾಗೆ ಐತಿಹಾಸಿಕ ಭೇಟಿ ನೀಡಿದ್ದಾರೆ. ಕಳೆದ ಎಂಟು ದಶಮಾನಗಳಿಂದಲೂ ಉಭಯ ರಾಷ್ಟ್ರಗಳ...
ಬರಾಕ್ ಒಬಾಮಾ
ಬರಾಕ್ ಒಬಾಮಾ
Updated on: 

ಹವಾನಾ:  ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಕ್ಯೂಬಾಗೆ ಐತಿಹಾಸಿಕ ಭೇಟಿ ನೀಡಿದ್ದಾರೆ. ಕಳೆದ ಎಂಟು ದಶಮಾನಗಳಿಂದಲೂ ಉಭಯ ರಾಷ್ಟ್ರಗಳ ಮಧ್ಯೆ ಶೀತಲ ಸಮರವುಂಟಾಗಿ ಯಾವುದೇ ದ್ವಿಪಕ್ಷಿಯ ಮಾತುಕತೆ ನಡೆದಿರಲಿಲ್ಲ. ಇದೇ ಮೊದಲ ಸಲ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಕ್ಯೂಬಾಗೆ ಭೇಟಿ ನೀಡಿದ್ದಾರೆ.

ಒಬಾಮ ಭೇಟಿ  ಹಿನ್ನೆಲೆಯಲ್ಲಿ ಕ್ಯೂಬಾ ರಾಜಧಾನಿ ಹವಾನಾದಲ್ಲಿ ಭಾರಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಎರಡು ದಿನಗಳ ಪ್ರವಾಸ ಕೈಗೊಂಡಿರುವ ಒಬಾಮ ಜತೆ ಪತ್ನಿ ಮಿಷೆಲ್, ಪುತ್ರಿಯರಾದ ಮಲಿಯಾ ಹಾಗೂ ಸಾಷಾ ಸಹ ಪ್ರಯಾಣ ಬೆಳೆಸಿದ್ದಾರೆ.

ಪ್ರವಾಸದ ವೇಳೆ ಕ್ಯೂಬಾ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಜತೆಗೆ ದ್ವಿಪಕ್ಷೀಯ ಮಾತುಕತೆ ಹಾಗೂ ಅವರೊಂದಿಗೆ ಅಧಿಕೃತ ಔತಣಕೂಟದಲ್ಲಿ ಒಬಾಮ ಪಾಲ್ಗೊಳ್ಳಲಿದ್ದಾರೆ. ನಂತರ ಅಲ್ಲಿನ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಬರಾಕ್‌ ಒಬಾಮ ಕ್ಯೂಬಾ ಭೇಟಿಗೆ ಅಮೆರಿಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವರ ಪ್ರವಾಸಕ್ಕೆ ಕೆಲವೆಡೆ ಅಸಮಾಧಾನವೂ ಕೇಳಿಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com