ಅಕ್ರಮವಾಗಿ ಭಾರತೀಯ ಕಂಪೆನಿಗೆ ಹೊರಗುತ್ತಿಗೆ ನೀಡಿದ ಅಮೆರಿಕದ ಗುತ್ತಿಗೆದಾರನಿಗೆ 3.1 ದಶಲಕ್ಷ ಡಾಲರ್ ದಂಡ

ಭಾರತೀಯ ಮೂಲದ ಉಪ ಗುತ್ತಿಗೆದಾರರಿಗೆ ಸರ್ಕಾರದ ಕೆಲಸವನ್ನು ಕಾನೂನುಬಾಹಿರವಾಗಿ ಹೊರಗುತ್ತಿಗೆ ನೀಡಿದ್ದಕ್ಕಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಭಾರತೀಯ ಮೂಲದ ಉಪ ಗುತ್ತಿಗೆದಾರರಿಗೆ ಸರ್ಕಾರದ ಕೆಲಸವನ್ನು ಕಾನೂನುಬಾಹಿರವಾಗಿ ಹೊರಗುತ್ತಿಗೆ ನೀಡಿದ್ದಕ್ಕಾಗಿ ಅಮೆರಿಕದ ಗುತ್ತಿಗೆದಾರರೊಬ್ಬರಿಗೆ 3.1 ದಶಲಕ್ಷ ಡಾಲರ್ ನಷ್ಟು ಭಾರೀ ಮೊತ್ತದ ದಂಡ ವಿಧಿಸಲಾಗಿದೆ.

ಫೋಕಸ್ಡ್ ಟೆಕ್ನಾಲಜೀಸ್ ಇಮೇಜಿಂಗ್ ಸರ್ವೀಸಸ್ ನ ಮಾಲಿಕ ಚಾರ್ಲ್ಸ್ ತೋಬಿನ್  ಮತ್ತು ಮಾಜಿ ಸಹ ಮಾಲಿಕ ಜೂಲಿ ಬೆನ್ ವೇರ್ ತಾವು ನ್ಯೂಯಾರ್ಕ್ ಫೆಡರಲ್ ಕಾನೂನನ್ನು ಉಲ್ಲಂಘಿಸಿ 2008-09ರಲ್ಲಿ ಮುಂಬೈಯ ಉಪ ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ ಮತ್ತು ಈ ಸಂಬಂಧ ದಂಡ ಕಟ್ಟಲು ಒಪ್ಪಿಕೊಂಡಿದ್ದಾರೆ.

ಉಪ ಗುತ್ತಿಗೆ ಪಡೆದಿದ್ದ ಭಾರತದ ಕಂಪೆನಿಗೆ ನಿಯಮ ಉಲ್ಲಂಘನೆ ಬಗ್ಗೆ ಅರಿವಿರಲಿಲ್ಲ. ಅದು ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದಾಗಿ ನ್ಯೂಯಾರ್ಕ್ ನ ಅಟೋರ್ನಿ ಜನರಲ್ ಎರಿಕ್ ಚನೈದರ್ಮನ್ ತಿಳಿಸಿದ್ದಾರೆ.

ಅಂಗವಿಕಲರಿಗಾಗಿ ಇರುವ ನ್ಯೂಯಾರ್ಕ್ ಸ್ಟೇಟ್ ಇಂಡಸ್ಟ್ರೀಸ್ ಮತ್ತು ನ್ಯಾಯಾರ್ಕ್ ಸ್ಟೇಟ್ ಡಿವಿಶನ್ ಆಫ್ ಕ್ರಿಮಿನಲ್ ಜಸ್ಟೀಸ್ ಸರ್ವೀಸಸ್ ಮಧ್ಯೆ 2008-09ರಲ್ಲಿ 3.45 ದಶಲಕ್ಷಕ್ಕೆ ಒಪ್ಪಂದ ನಡೆದಿತ್ತು. ಫಿಂಗರ್ ಪ್ರಿಂಟ್ ಕಾರ್ಡುಗಳನ್ನು ದಾಖಲೆಯಾಧಾರಿತಗೊಳಿಸುವ ಕೆಲಸವಾಗಿತ್ತು.

ಫೋಕಸ್ ಡ್ ಕಂಪೆನಿ ಭಾರತದ ಕಂಪೆನಿಗೆ 2008 ಸೆಪ್ಟೆಂಬರ್ ನಿಂದ 2009, ಸೆಪ್ಟೆಂಬರ್ ವರೆಗೆ 82 ಸಾವಿರ ಡಾಲರ್ ಮಾತ್ರ ನೀಡಿತ್ತು. ಆದರೆ ತಾವು ಪಡೆದ ಕೆಲಸ ಕಾನೂನುಬಾಹಿರವೆಂಬುದು ಭಾರತದ ಕಂಪೆನಿಗೆ ಗೊತ್ತಿರಲಿಲ್ಲ. ಹೊರಗುತ್ತಿಗೆ ಕಾನೂನುಬಾಹಿರ ಯಾಕೆಂದರೆ ಭಾರತದ ಕಂಪೆನಿಗೆ ಸುಮಾರು 16 ದಶಲಕ್ಷ ಜನರ ಖಾಸಗಿ ಮಾಹಿತಿಗಳನ್ನು ಕಳುಹಿಸಿತ್ತು. ಅದು ಮಾಹಿತಿಗಳನ್ನು ಸ್ವೀಕರಿಸಲು ಅನಧಿಕೃತವಾಗಿದ್ದರಿಂದ ಹೊರಗುತ್ತಿಗೆ ಕಾನೂನುಬಾಹಿರವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಫೋಕಸ್ ಡ್ ಮತ್ತು ತಾಬಿನ್ ಗೆ 3.05 ದಶಲಕ್ಷ ಡಾಲರ್ ದಂಡ
ವಿಧಿಸಲಾಗಿದ್ದರೆ ಬೆನ್ ವೇರ್ ಗೆ 50 ಸಾವಿರ ಡಾಲರ್ ದಂಡ ಹೇರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com