ಗಡಿ ದಾಟಲು ಯತ್ನಿಸಿದ ಪಾಕ್ ಪ್ರಜೆ ಬಂಧನ

ಇಂಡೋ-ಪಾಕಿಸ್ತಾನ ಗಡಿ ದಾಟಲು ಯತ್ನಿಸಿದ ಪಾಕಿಸ್ತಾನದ ಪ್ರಜೆಯನ್ನು ಗಡಿ ಭದ್ರತಾ ದಳ(ಬಿಎಸ್ ಎಫ್) ಸಿಬ್ಬಂದಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಭುಜ್: ಇಂಡೋ-ಪಾಕಿಸ್ತಾನ ಗಡಿ ದಾಟಲು ಯತ್ನಿಸಿದ ಪಾಕಿಸ್ತಾನದ ಪ್ರಜೆಯನ್ನು ಗಡಿ ಭದ್ರತಾ ದಳ(ಬಿಎಸ್ ಎಫ್) ಸಿಬ್ಬಂದಿ ನಿನ್ನೆ ಬಂಧಿಸಿದ್ದಾರೆ. 
ಕುಚ್ ಜಿಲ್ಲೆಯ ಬಿಯರ್ ಬೆಟ್ ನಲ್ಲಿರುವ ಗಡಿ ದಾಟುತ್ತಿದ್ದ ವೇಳೆ ಬಿಎಸ್ ಎಫ್ ಯೋಧರಿಗೆ ಸಿಕ್ಕಿಬಿದ್ದಿದ್ದಾನೆ. ರರೀಮ್ ಬಾಯ್ ಖಾನ್(40) ಬಂಧಿತ ಆರೋಪಿ. 
ನಿನ್ನೆ ಸಂಜೆ ಆರೋಪಿಯನ್ನು ಬಂಧಿಸಲಾಗಿದ್ದು, ಅದೇ ಜಾಗದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಭಾರತದಲ್ಲಿರುವ ತನ್ನ ತಮ್ಮನನ್ನು ಹುಡುಕಿಕೊಂಡು ಬರುತ್ತಿದ್ದೆ ಎಂದು ರಹೀಮ್ ಬಾಯ್ ಖಾನ್ ಹೇಳಿದ್ದಾನೆ. ಬಂಧಿತನನ್ನು ಗುಜರಾತ್ ಪೊಲೀಸರ ವಶಕ್ಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com