ಭಾರತ-ಇರಾನ್ ಸಂಬಂಧ ಇತಿಹಾಸದಂತೆ ಹಳೆಯದಾದದ್ದು: ನರೇಂದ್ರ ಮೋದಿ

ಭಾರತ-ಇರಾನ್ ಸಂಬಂಧವನ್ನು ಇತಿಹಾಸದಂತೆ ಅತ್ಯಂತ ಹಳೆಯದಾದದ್ದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ...
ಟೆಹ್ರಾನ್ ನ ಜೊಮ್ ಹೌರಿ ಕಟ್ಟಡದಲ್ಲಿ ನಡೆದ ಸಭೆಯ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಇರಾನ್ ಅಧ್ಯಕ್ಷ ಹಸ್ಸನ್ ರೌಹಾನ್
ಟೆಹ್ರಾನ್ ನ ಜೊಮ್ ಹೌರಿ ಕಟ್ಟಡದಲ್ಲಿ ನಡೆದ ಸಭೆಯ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಇರಾನ್ ಅಧ್ಯಕ್ಷ ಹಸ್ಸನ್ ರೌಹಾನ್

ಟೆಹ್ರಾನ್: ಭಾರತ-ಇರಾನ್ ಸಂಬಂಧವನ್ನು ಇತಿಹಾಸದಂತೆ ಅತ್ಯಂತ ಹಳೆಯದಾದದ್ದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಎರಡೂ ದೇಶಗಳ ಮಧ್ಯೆ 12 ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಅವುಗಳಲ್ಲಿ ಚಬಹಾರ್ ಬಂದರು ಅಭಿವೃದ್ಧಿಗೆ ಮೂರು ಒಪ್ಪಂದಗಳು ಪ್ರಮುಖವಾಗಿದೆ.

ಭಾರತ ಮತ್ತು ಇರಾನ್ ಹೊಸ ಸ್ನೇಹಿತರಲ್ಲ. ನಮ್ಮ ಸ್ನೇಹ ಇತಿಹಾಸದಂತೆ ಹಳೆಯದಾದದ್ದು ಎಂದು ಇಂದು ಇರಾನ್ ಅಧ್ಯಕ್ಷ ಹಸ್ಸನ್ ರೌಹಾನಿ ಜೊತೆ ನಡೆದ ಜಂಟಿ ಮಾಧ್ಯಮ ಗೋಷ್ಟಿಯಲ್ಲಿ ಮೋದಿ ಹೇಳಿದರು.

ಕಲೆ, ವಾಸ್ತುಶಿಲ್ಪ, ಯೋಚನೆ, ಸಂಪ್ರದಾಯ, ಸಂಸ್ಕೃತಿ ಮತ್ತು ಆರ್ಥಿಕತೆ ಮೂಲಕ ಶತಮಾನಗಳಿಂದ ಎರಡೂ ದೇಶಗಳು ಸಂಪರ್ಕವನ್ನು ಹೊಂದಿವೆ. 2001ರಲ್ಲಿ ಗುಜರಾತ್ ಭೂಕಂಪದ ನಂತರ ಭಾರತಕ್ಕೆ ಸಹಾಯ ಮಾಡಿದ ರಾಷ್ಟ್ರಗಳಲ್ಲಿ ಇರಾನ್ ಮೊದಲನೆಯದ್ದಾಗಿದೆ. ಹಾಗೆಯೇ ಇರಾನ್ ನ ಕಷ್ಟದ ಕಾಲದಲ್ಲಿ ಭಾರತ ಕೂಡ ಅದಕ್ಕೆ ಬೆನ್ನೆಲುಬಾಗಿ ನಿಂತಿದೆ ಎಂದರು.

ಇರಾನ್ ಅಧ್ಯಕ್ಷರ ನಾಯಕತ್ವ ಗುಣ ಮತ್ತು ಸ್ಪಷ್ಟ ದೂರದೃಷ್ಟಿತ್ವ ಗುಣವನ್ನು ಶ್ಲಾಘಿಸಿದ ಮೋದಿಯವರು ಇಂದಿನ ಮಾತುಕತೆ ಸಂಪೂರ್ಣ ದ್ವಿಪಕ್ಷೀಯ ಸಂಬಂಧಗಳ ಕುರಿತಾಗಿದ್ದವು ಎಂದರು.

ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಿಗೆ ಸಂಬಂಧಪಟ್ಟಂತೆ ನಾವು ಪರಸ್ಪರ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡೆವು. ನಮ್ಮ ಸಹಭಾಗಿತ್ವ ಸಂಪೂರ್ಣವಾಗಿ ಗಣನೀಯವಾಗಿದೆ. ಇಂದಿನ ಒಪ್ಪಂದ ದ್ವಿಪಕ್ಷೀಯ ಸಂಬಂಧ ವೃದ್ಧಿಯಲ್ಲಿ ಹೊಸ ಅಧ್ಯಾಯವನ್ನು ತೆರೆಯಲಿದೆ ಎಂದು ಪ್ರಧಾನಿ ಆಶಿಸಿದರು. ಇಂದು ಸಂಜೆ ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನಗಳ ನಡುವೆ ತ್ರಿಪಕ್ಷೀಯ ಸಾರಿಗೆ ಮತ್ತು ಸಾರಿಗೆ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com