
ವಾಷಿಂಗ್ಟನ್: 26/11 ಮುಂಬೈ ಉಗ್ರರ ದಾಳಿ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಭಾರತದೊಂದಿಗೆ ಸಹಕರಿಸುವಂತೆ ಪಾಕಿಸ್ತಾನಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ಶುಕ್ರವಾರ ಆಗ್ರಹಿಸಿದೆ.
ಈ ಕುರಿತಂತೆ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಅಮೆರಿಕದ ವಿದೇಶಾಂಗ ಇಲಾಖೆ ಉಪವಕ್ತಾರ ಮಾರ್ಕ್ ಟೋನರ್ ಅವರು, ಮುಂಬೈ ದಾಳಿಯೊಂದು ಭೀಕರ ಉಗ್ರರ ದಾಳಿಯಾಗಿದ್ದು, ನಮಗೆ ನ್ಯಾಯಬೇಕಿದೆ. ಮುಂಬೈ ಉಗ್ರರ ದಾಳಿ ಪ್ರಕರಣ ಸಂಬಂಧ ಭಾರತ ತನಿಖಾಧಿಕಾರಿಗಳೊಂದಿಗೆ ಸಹಕರಿಸುವಂತೆ ಪಾಕಿಸ್ತಾನಕ್ಕೆ ಈ ಹಿಂದಿನಿಂದಲೂ ಅಮೆರಿಕ ಆಗ್ರಹಿಸುತ್ತಲೇ ಬಂದಿದೆ. ಈಗಲೂ ತನಿಖೆಗೆ ಸಹಕರಿಸುವಂತೆ ಪಾಕಿಸ್ತಾನಕ್ಕೆ ಆಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ತನ್ನ ಮಣ್ಣಿನಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿರುವ ತಾಲಿಬಾನ್ ನಂತರ ಉಗ್ರ ಸಂಘಟನೆಗಳನ್ನು ಗುರ್ತಿಸಬೇಕಿದೆ. ಈ ಹಿಂದಿನಿಂದಲೂ ಪಾಕಿಸ್ತಾನಕ್ಕೆ ಇದನ್ನು ನಾವು ಆಗ್ರಹಿಸುತ್ತಲೇ ಬಂದಿದ್ದೇವೆ. ಈ ಆಗ್ರಹವನ್ನು ಇನ್ನು ಮುಂದೆಯೂ ಮುಂದುವರೆಸುತ್ತೇವೆ. ಉಗ್ರ ಸಂಘಟನೆಗಳಿಂದಾಗಿ ಪಾಕಿಸ್ತಾನದ ಮಣ್ಣಿಗೆ ಇಂದು ಬೆದರಿಕೆಯಿದೆ ಎಂದು ಹೇಳಿದ್ದಾರೆ.
Advertisement