ಅಕ್ಕನ ಕಣ್ಣು ಕಿತ್ತು ಕಾಲು ಕತ್ತರಿಸಿದ ಸ್ವಂತ ಸಹೋದರರು

ಸ್ವಂತ ತಮ್ಮಂದಿರೇ ತಮ್ಮ ಒಡಹುಟ್ಟಿದ ಸಹೋದರಿಯ ಕಣ್ಣುಗುಡ್ಡೆ ಕಿತ್ತು ಹಾಕಿ ಬಳಿಕ ಆಕೆಯ ಕಾಲುಗಳನ್ನು ಕತ್ತರಿಸಿದ ಹೃದಯವಿದ್ರಾವಕ ಘಟನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಲಾಹೋರ್:  ಸ್ವಂತ ತಮ್ಮಂದಿರೇ ತಮ್ಮ ಒಡಹುಟ್ಟಿದ ಸಹೋದರಿಯ ಕಣ್ಣುಗುಡ್ಡೆ ಕಿತ್ತು ಹಾಕಿ ಬಳಿಕ ಆಕೆಯ ಕಾಲುಗಳನ್ನು ಕತ್ತರಿಸಿದ ಹೃದಯವಿದ್ರಾವಕ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಲಾಹೋರಿನಿಂದ 400 ಕಿ.ಮೀ ದೂರದಲ್ಲಿರುವ ಮುಜಾಫರ್‍ಘರ್ ಎಂಬಲ್ಲಿ ಬುಧವಾರ ಈ ಘಟನೆ ನಡೆದಿದೆ. ಮಹಿಳೆ ತನ್ನ ಮಗಳನ್ನು ಅಪಹರಿಸಿರುವುದಾಗಿ ಆರೋಪಿಸಿ ಆಕೆಯ ಸಹೋದರ ಈ ಮೊದಲೇ ಮಹಿಳೆ ವಿರುದ್ಧ ಎಫ್‍ಐಆರ್ ದಾಖಲಿಸಿದ್ದನು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ತನ್ನ ಮಾವ ಹಾಗೂ ಆತನ ಸಹೋದರ ಸೇರಿಕೊಂಡು ಈ ಘೋರ ಕೃತ್ಯವೆಸಗಿದ್ದಾರೆ. ಮಗಳು ಕಾಣೆಯಾಗಿರುವುದಕ್ಕೆ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ ಎಂದು ಅಸ್ವಸ್ಥ ಮಹಿಳೆಯ ಮಗಳು ಅಲ್ಲಿನ ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com