"ಪಾಕ್ ಭಯೋತ್ಪಾದಕ ಪ್ರಯೋಜಕ ರಾಷ್ಟ್ರ" ಅಭಿಯಾನ ಅಮೆರಿಕ ಇತಿಹಾಸದಲ್ಲೇ ಅತೀ ಹೆಚ್ಚು ಜನಪ್ರಿಯ

ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನವನ್ನು ಭಯೋತ್ಪಾದಕ ಪ್ರಾಯೋಜಿತ ರಾಷ್ಟ್ರ ಎಂದು ಘೋಷಣೆ ಮಾಡಬೇಕು ಎಂದು ಬಂದಿದ್ದ ಅರ್ಜಿ ಅಮೆರಿಕದ ವೈಟ್ ಹೌಸ್ ಇತಿಹಾಸದಲ್ಲಿಯೇ ಅತೀಹೆಚ್ಚು ಜನಪ್ರಿಯತೆ ಪಡೆದ ಅರ್ಜಿ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ವಾಷಿಂಗ್ಟನ್: ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನವನ್ನು ಭಯೋತ್ಪಾದಕ ಪ್ರಾಯೋಜಿತ ರಾಷ್ಟ್ರ ಎಂದು ಘೋಷಣೆ ಮಾಡಬೇಕು ಎಂದು ಬಂದಿದ್ದ ಅರ್ಜಿ ಅಮೆರಿಕದ ವೈಟ್ ಹೌಸ್  ಇತಿಹಾಸದಲ್ಲಿಯೇ ಅತೀಹೆಚ್ಚು ಜನಪ್ರಿಯತೆ ಪಡೆದ ಅರ್ಜಿ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವಂತೆ ಈ ಮೂಲಕ ನಾವು ನಮ್ಮ ಸರ್ಕಾರವನ್ನು ಕೋರುತ್ತಿದ್ದೇವೆ ಎಂದು ಸಲ್ಲಿಕೆಯಾದ ಅರ್ಜಿ ಸಂಖ್ಯೆ HR 6069 ಅರ್ಜಿ  ಅಮೆರಿಕದ ಇತಿಹಾಸದಲ್ಲಿಯೇ ಅತೀ ಹೆಚ್ಚು ಜನಪ್ರಿಯತೆ ಪಡೆದ ಅರ್ಜಿ ಎಂಬ ಖ್ಯಾತಿಗಳಿಸಿದೆ. ಮನವಿಗೆ ವಿಶ್ವಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, 6 ಲಕ್ಷಕ್ಕೂ ಅಧಿಕ ಸಹಿ  ಸಂಗ್ರಹವಾಗಿದೆ. ಶ್ವೇತ ಭವನ ಮನವಿ ಸಂಖ್ಯೆಯನ್ನು ಲೆಕ್ಕ ಹಾಕುವ ಅಂತಿಮ ಕ್ಷಣದಲ್ಲೂ ಕೂಡ ಮನವಿಗೆ ಸುಮಾರು 50 ಸಾವಿರಕ್ಕೂ ಅಧಿಕ ಸಹಿ ಸಂಗ್ರಹವಾಗಿರುವುದು ಮನವಿಯ  ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ  ಈ ಆನ್‌ಲೈನ್‌ ಮನವಿಗೆ ಬಿದ್ದಿರುವ ಒಟ್ಟು ಸಹಿಗಳ ಸಂಖ್ಯೆ 6,13,830ಕ್ಕೇರಿದ್ದು, ಶ್ವೇತಭವನದ ನಿಯಮಾವಳಿಗಳ ಪ್ರಕಾರ ಯಾವುದೇ ಮನವಿಗೆ 1 ಲಕ್ಷಕ್ಕೂ ಅಧಿಕ ಸಹಿ  ಸಂಗ್ರಹವಾದರೆ ಅಂತಹ ಅರ್ಜಿ ವಿಲೇವಾರಿಗೆ ಅಥವಾ ಸರ್ಕಾರದ ಅಧಿಕೃತ ಸ್ಪಂಧನೆಗೆ ಅರ್ಹವಾಗಿರುತ್ತದೆ. ಆದರೆ ಈ ಅರ್ಜಿಗೆ ಬರೊಬ್ಬರಿ 6 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹವಾಗಿದ್ದರೂ ಕೂಡ  ಈ ಅರ್ಜಿ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಹೇಳಿ ಅಮೆರಿಕ ಇದನ್ನು ತನ್ನ ಸಂಗ್ರಹಪಟ್ಟಿಗೆ ಸೇರಿಸಿರುವುದು ಮನವಿದಾರರ ನಿರಾಶೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com