ಬ್ರಹ್ಮಪುತ್ರ ನದಿ ಅಣೆಕಟ್ಟೆಯಿಂದ ಭಾರತಕ್ಕೆ ಯಾವುದೇ ತೊಂದರೆಯಿಲ್ಲ: ಚೀನಾ ಸ್ಪಷ್ಟನೆ

ಬ್ರಹ್ಮಪುತ್ರ ಉಪನದಿಗೆ ಅಡ್ಡಲಾಗಿ ಟಿಬೆಲ್ ನಲ್ಲಿ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಯೋಜನೆಯಿಂದ ಭಾರತಕ್ಕೆ ಯಾವುದೇ ತೊಂದರೆಗಳಾಗುವುದಿಲ್ಲ ಎಂದು ಚೀನಾ ಸ್ಪಷ್ಟನೆ ಭಾನುವಾರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಬ್ರಹ್ಮಪುತ್ರ ಉಪನದಿಗೆ ಅಡ್ಡಲಾಗಿ ಟಿಬೆಲ್ ನಲ್ಲಿ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಯೋಜನೆಯಿಂದ ಭಾರತಕ್ಕೆ ಯಾವುದೇ ತೊಂದರೆಗಳಾಗುವುದಿಲ್ಲ ಎಂದು ಚೀನಾ ಸ್ಪಷ್ಟನೆ ಭಾನುವಾರ ನೀಡಿದೆ.

ಈ ಕುರಿತಂತೆ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯ, ಚೀನಾ ಕ್ಸಿಬುಕು ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟೆಯಿಂದ ಬ್ರಹ್ಮಪುತ್ರ ನದಿಯ ವಾರ್ಷಿಕ ಹರಿಯುವಿ ನೀರಿನ ಸೇ.0.02 ಭಾಗವನ್ನು ಮಾತ್ರ ಬಳಸಿಕೊಳ್ಳಲಾಗುತ್ತದೆ. ಇದರಿಂದ ಬ್ರಹ್ಮಪುತ್ರ ನದಿಯ ಹರಿವಿನ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ ಎಂದು ಹೇಳಿದೆ.

ಅಣೆಕಟ್ಟು ನಿರ್ಮಾಣದಿದಂದ ಟಿಬೆಲ್ ನಲ್ಲಿರುವ ಜನರಿಗೆ ಆಹಾರ ಭದ್ರತೆ, ಉದ್ಯೋಗವನ್ನು ಸೃಷ್ಟಿಸಬಹುದಾಗಿದೆ. ಅಲ್ಲದೆ ಪ್ರವಾಹವನ್ನು ತಡೆಯಬಹುದಾಗಿದೆ. ಬ್ರಹ್ಮಪುತ್ರ ನದಿಯನ್ನು ಚೀನಾ ದೇಶವು ಕೇವಲ. ಶೇ.1 ರಷ್ಟು ಮಾತ್ರ ಬಳಸಿಕೊಳ್ಲಿದೆ. ಯೋಜನೆಯಿಂದ ಬ್ರಹ್ಮಪುತ್ರ ನದಿಯ ಹರಿವಿನಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಹಾಗೂ ಭಾರತಕ್ಕೂ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ತಿಳಿಸಿದೆ.

ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದ್ದು, ಬ್ರಹ್ಮಪುತ್ರ ನದಿಗೆ ತಡೆಯೊಡ್ಡಲಾಗುತ್ತದೆ ಎಂದು ಚೀನಾ ಅಕ್ಟೋಬರ್ 1 ರಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com