ಜಲಯುದ್ಧದ ಭ್ರಾಂತಿ ಭಾರತದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಾರದು: ಚೀನಾ

ಬ್ರಹ್ಮಪುತ್ರ ಉಪನದಿಯ ನೀರನ್ನು ಭಾರತಕ್ಕೆ ಹಾಗಂತೆ ತಡೆಗಟ್ಟುವ ಮೂಲಕ ಭಾರತದ ವಿರುದ್ಧ ಜಲಯುದ್ಧ ನಡೆಸುವ ಸಾಧ್ಯತೆಗಳನ್ನು ತಳ್ಳಿಹಾಕಿರುವ ಚೀನಾ, ಜಲಯುದ್ಧದ ಊಹಾಪೋಹಗಳು ಭಾರತದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಾರದು ಎಂದು ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ಬ್ರಹ್ಮಪುತ್ರ ಉಪನದಿಯ ನೀರನ್ನು ಭಾರತಕ್ಕೆ ಹಾಗಂತೆ ತಡೆಗಟ್ಟುವ ಮೂಲಕ ಭಾರತದ ವಿರುದ್ಧ ಜಲಯುದ್ಧ ನಡೆಸುವ ಸಾಧ್ಯತೆಗಳನ್ನು ತಳ್ಳಿಹಾಕಿರುವ ಚೀನಾ, ಜಲಯುದ್ಧದ ಊಹಾಪೋಹಗಳು ಭಾರತದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಾರದು ಎಂದು ಹೇಳಿದೆ.

ಬ್ರಹ್ಮಪುತ್ರ ನದಿ ನೀರು ಹಂಚಿಕೆ ವಿಷಯವಾಗಿ ಭಾರತ- ಬಾಂಗ್ಲಾದೇಶದೊಂದಿಗೆ ಬಹುಪಕ್ಷೀಯ ಸಹಕಾರ ಕಾರ್ಯವಿಧಾನವನ್ನು ಚರ್ಚಿಸಲು ಚೀನಾ ಸಿದ್ಧವಿದೆ ಎಂಬ ವರದಿಯನ್ನು ಚೀನಾ ತಳ್ಳಿಹಾಕಿದೆ. ಜಲಯುದ್ಧದ ಭ್ರಾಂತಿಯಿಂದ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ಹದಗೆಡಬಾರದು, ಚೀನಾ ಬ್ರಹ್ಮಪುತ್ರ ನದಿಯ ನೀರನ್ನು ಭಾರತದ ವಿರುದ್ಧ ಬಳಕೆ ಮಾಡುವುದಿಲ್ಲ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ. ಬ್ರಹ್ಮಪುತ್ರ ನದಿ ನೀಡು ಹಂಚಿಕೆ ವಿಷಯವಾಗಿ ಈಗಾಗಲೇ ಭಾರತ ಹಾಗು ಚೀನಾ ನಡುವೆ ಪರಿಣಾಮಕಾರಿ ಸಹಕಾರ ಒಪ್ಪಂದ ಇದ್ದು, ಅದನ್ನೇ ಮುಂದುವರೆಸುವುದಾಗಿಯೂ ಚೀನಾ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಬ್ರಹ್ಮಪುತ್ರ ನದಿ ನೀರು ಹಂಚಿಕೆ ವಿಷಯವಾಗಿ ಭಾರತ- ಬಾಂಗ್ಲಾದೇಶದೊಂದಿಗೆ ಬಹುಪಕ್ಷೀಯ ಸಹಕಾರ ಕಾರ್ಯವಿಧಾನದ ಒಪ್ಪಂದಕ್ಕೆ ಚೀನಾ ಸಿದ್ಧವಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಪ್ರಕಟಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಚೀನಾ ಸ್ಪಷ್ಟನೆ ನೀಡಿದ್ದು, ಜಲಯುದ್ಧದ ಭ್ರಾಂತಿ ಭಾರತದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಾರದು ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com