ಕದನ ವಿರಾಮ ಉಲ್ಲಂಘನೆ: ಭಾರತೀಯ ರಾಜತಾಂತ್ರಿಕ ಅಧಿಕಾರಿಗೆ ಪಾಕ್ ಬುಲಾವ್

ಗಡಿಯಲ್ಲಿ ಪದೇಪದೆ ಕದನ ವಿರಾಮ ಉಲ್ಲಂಘಿಸುವ ಪಾಕಿಸ್ತಾನ ಇದೀಗ ಉಲ್ಟಾ ಹೊಡೆದಿದ್ದು, ನೀವೇ ಕದನ ವಿರಾಮ ಉಲ್ಲಂಘಿಸಿದ್ದೀರಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಇಸ್ಲಾಮಾಬಾದ್: ಗಡಿಯಲ್ಲಿ ಪದೇಪದೆ ಕದನ ವಿರಾಮ ಉಲ್ಲಂಘಿಸುವ ಪಾಕಿಸ್ತಾನ ಇದೀಗ ಉಲ್ಟಾ ಹೊಡೆದಿದ್ದು, ನೀವೇ ಕದನ ವಿರಾಮ ಉಲ್ಲಂಘಿಸಿದ್ದೀರಿ ಎಂದು ಆರೋಪಿಸಿ ಮಂಗಳವಾರ ಭಾರತೀಯ ರಾಯಭಾರಿಗೆ ಬುಲಾವ್ ನೀಡಿದೆ.
ಅಕ್ಟೋಬರ್ 23 ಮತ್ತು 24ರಂದು ಭಾರತ ಎರಡು ಬಾರಿ ಕದನ ವಿರಾಮ ಉಲ್ಲಂಘಿಸಿದೆ ಎಂದಿರುವ ಪಾಕ್, ಈ ಸಂಬಂಧ ಇಸ್ಲಾಮಾಬಾದ್ ನಲ್ಲಿರುವ ಡೆಪ್ಯೂಟಿ ಹೈಕಮೀಷನರ್ ಜೆ.ಪಿ. ಸಿಂಗ್ ಅವರನ್ನು ಕರೆಸಿಕೊಂಡು ತೀವ್ರ ಪ್ರತಿಭಟನೆ ವ್ಯಕ್ತ ಪಡಿಸಿದೆ.
ಫುಕ್ಲಿಯಾನ್ ಮತ್ತು ಛಾಪ್ರರ್ ಸೆಕ್ಟರ್ ನ ಗಡಿ ನಿಯಂತ್ರ ರೇಖೆ ಬಳಿ ಭಾರತೀಯ ಸೇನೆ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಒಂದು ಮಗು ಸೇರಿದಂತೆ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ಸೇನೆಯ ಕದನ ವಿರಾಮ ಉಲ್ಲಂಘನೆಯನ್ನು ರಾಜತಾಂತ್ರಿಕ ಅಧಿಕಾರಿಯ ಗಮನಕ್ಕೆ ತರಲಾಗಿದ್ದು, ಘಟನೆ ಕುರಿತು ಭಾರತ ತನಿಖೆ ನಡೆಸಿ, ವಿವರವನ್ನು ಪಾಕ್ ನೊಂದಿಗೆ ಹಂಚಿಕೊಳ್ಳುವಂತೆ ಹಾಗೂ ಕದನ ವಿರಾಮ ಗೌರವಿಸುವಂತೆ ಸಿಂಗ್ ಅವರಿಗೆ ಸೂಚಿಸಲಾಗಿದೆ ಎಂದು ಪಾಕ್ ಪ್ರಕಟಣೆ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ವಿಭಾಗದಲ್ಲಿ ಭಾರತೀಯ ಸೇನೆಯನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನಿ ಸೇನೆ ಇಂದು ಮತ್ತೆ ಕದನ ವಿರಾಮ ಉಲ್ಲಂಘಿಸಿ ಫಿರಂಗಿ ಹಾಗೂ ಸಣ್ಣ ಬಂದೂಕುಗಳಿಂದ ದಾಳಿ ನಡೆಸಿದೆ. 
ಬೆಳಗ್ಗೆ 10 ಗಂಟೆಗೆ ಆರಂಭವಾದ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಪಡೆಗಳು ತಕ್ಕ ಉತ್ತರ ನೀಡಿವೆ. ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ, ಗುಂಡಿನ ಘರ್ಷಣೆ ಮುಂದುವರೆದಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com