ಫೋರ್ಟ್ ಲಾದರ್ದೆಲ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನು ಕೇವಲ ಒಂದು ವಾರ ಬಾಕಿ ಉಳಿದಿದ್ದು ಚುನಾವಣಾ ಕಣ ಕುತೂಹಲ ಕೆರಳಿಸಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮಧ್ಯೆ ತೀವ್ರ ಹಣಾಹಣಿ ಎದುರಾಗಿದೆ.
ಇಮೇಲ್ ಸೋರಿಕೆ ಹಗರಣ ಹಿಲರಿ ಕ್ಲಿಂಟನ್ ಅವರನ್ನು ಸಂಕಷ್ಟಕ್ಕೀಡುಮಾಡಿದೆ.ಈ ವಿಷಯ ಎತ್ತಿಕೊಂಡು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ವಾಗ್ದಾಳಿ ನಡೆಸಲು ಹೊಸ ಅಸ್ತ್ರ ಸಿಕ್ಕಂತಾಗಿದೆ.
ಹಿಲರಿಯವರು ಟ್ರಂಪ್ ಅವರಿಗಿಂತ ಶೇಕಡಾ 1ರಷ್ಟು ಮಾತ್ರ ಮುಂದಿದ್ದು 4 ಸುತ್ತಿನ ಸ್ಪರ್ಧೆಯಲ್ಲಿ ಕ್ರಮವಾಗಿ ಇಬ್ಬರು ಶೇಕಡಾ 46 ಮತ್ತು ಶೇಕಡಾ 45ರಷ್ಟು ಮತ ಗಳಿಸಿದ್ದಾರೆ.
ಪ್ರಮುಖ ರಾಜ್ಯವಾದ ಫ್ಲೋರಿಡಾದಲ್ಲಿ ಸೆಪ್ಟೆಂಬರ್ ನಲ್ಲಿ ಹಿಂದುಳಿದಿದ್ದ ಡೊನಾಲ್ಡ್ ಟ್ರಂಪ್ ಇದೀಗ ಮುಂದಿದ್ದಾರೆ ಎಂದು ಎಬಿಸಿ ನ್ಯೂಸ್/ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಮೆಕ್ಸಿಕೋದಲ್ಲಿ ನಿನ್ನೆ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಹಿಲರಿಯವರ ಅಪರಾಧ ಉದ್ದೇಶಪೂರ್ವಕವಾಗಿದೆ, ಅವರು ತಿಳಿದೇ ಮಾಡಿದ್ದಾರೆ ಎಂದಿದ್ದಾರೆ.