4 ಆತ್ಮಾಹುತಿ ದಾಳಿಕೋರರನ್ನು ಹತ್ಯೆಗೈದ ಪಾಕ್ ಸೇನೆ

ವಾಯುವ್ಯ ಪೇಶಾವರದ ಹೊರವಲಯದಲ್ಲಿರುವ ಕ್ರಿಶ್ಚಿಯನ್ ಕಾಲೋನಿ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದ ನಾಲ್ವರು ಆತ್ಮಾಹುತಿ ಬಾಂಬ್...
ಪಾಕಿಸ್ತಾನ ಸೇನೆ
ಪಾಕಿಸ್ತಾನ ಸೇನೆ
Updated on
ಖೈಬರ್ ಫ‌ಕ್‌ತುನ್‌ಖ್ವಾ: ವಾಯುವ್ಯ ಪೇಶಾವರದ ಹೊರವಲಯದಲ್ಲಿರುವ ಕ್ರಿಶ್ಚಿಯನ್ ಕಾಲೋನಿ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದ ನಾಲ್ವರು ಆತ್ಮಾಹುತಿ ಬಾಂಬ್ ದಾಳಿಕೋರರನ್ನು ಪಾಕ್ ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. 
ವಾರ್ಸಾಕ್ ಡ್ಯಾಮ್ ಗೆ ಸಮೀಪವಿರುವ ಕ್ರಿಶ್ಚಿಯನ್ ಕಾಲೋನಿಯ ಮೇಲೆ ದಾಳಿ ನಡೆಸಲು ಆತ್ಮಾಹುತಿ ದಾಳಿಕೋರರು ಸನ್ನದ್ಧರಾಗಿದ್ದರು. ಇವರನ್ನು ತಡೆಯಲು ಪಾಕಿಸ್ತಾನ ಭದ್ರತಾ ಪಡೆಗಳು ಮುಂದಾಗಿದ್ದು ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಆತ್ಮಾಹುತಿ ದಾಳಿಕೋರರು ಮೃತಪಟ್ಟಿದ್ದಾರೆ. 
ಆತ್ಮಾಹುತಿ ದಾಳಿಕೋರರ ವಿರುದ್ಧದ ಎನ್ಕೌಂಟರ್ ನಲ್ಲಿ ಪಾಕ್ ಸೇನೆಗೆ ಬೆಂಬಲವಾಗಿ ಸೇನಾ ಹೆಲಿಕಾಪ್ಟರ್ ಗಳನ್ನು ಬಳಸಿಕೊಳ್ಳಲಾಯಿತು. ಶೇಕಡ 90ರಷ್ಟು ಮುಸ್ಲಿಂರಿರುವ ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಉಗ್ರರು, ದುಷ್ಕರ್ಮಿಗಳು, ಮತಾಂಧರಿಂದ ಪದೇ ಪದೇ ದಾಳಿಗಳು ನಡೆಯುತ್ತಿರುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com