ಕಾರ್ಯಾಚರಣೆಗೆ ಕ್ಷಣಗಣನೆ ಆರಂಭವಾಗಿದೆ: ಚೀನಾ ಮಾಧ್ಯಮಗಳ ಯುದ್ಧೋತ್ಸಾಹ!

ಭಾರತ ಮತ್ತು ಚೀನಾ ನಡುವಿನ ಡೊಕ್ಲಾಂ ಗಡಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಅಲ್ಲಿನ ಮಾಧ್ಯಮಗಳಲ್ಲಿ ಯುದ್ಧೋತ್ಸಾಹ ಹೆಚ್ಚಾಗಿದ್ದು, ಚೀನಾ ಸೇನಾಕಾರ್ಯಾಚರಣೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ವರದಿಗಳನ್ನು ಬಿತ್ತರಿಸುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಡೊಕ್ಲಾಂ ಗಡಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಅಲ್ಲಿನ ಮಾಧ್ಯಮಗಳಲ್ಲಿ ಯುದ್ಧೋತ್ಸಾಹ ಹೆಚ್ಚಾಗಿದ್ದು, ಚೀನಾ ಸೇನಾಕಾರ್ಯಾಚರಣೆಗೆ ಕ್ಷಣಗಣನೆ ಆರಂಭವಾಗಿದೆ ಎಂದು  ವರದಿಗಳನ್ನು ಬಿತ್ತರಿಸುತ್ತಿವೆ.

ಚೀನಾದ ಖ್ಯಾತ ದಿನಪತ್ರಿಕೆಯೊಂದು ಈ ಬಗ್ಗೆ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದ್ದು, ಎಚ್ಚರಿಕೆ ನಡುವೆಯೂ ಭಾರತ ತನ್ನ ಮೊಂಡುತನ ಮುಂದುವರೆಸಿದೆ. ಹೀಗಾಗಿ ಕಾರ್ಯಾಚರಣೆಯ ಹೊರತು ಬೇರೆ ಮಾರ್ಗವಿಲ್ಲ.  ಸೇನಾ ಕಾರ್ಯಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಸಿದ್ಧವಾಗಿರಿ ಎಂದು ತನ್ನ ಸಂಪಾದಕೀಯದಲ್ಲಿ ಭಾರತಕ್ಕೆ ಎಚ್ಚರಿಕೆ ನೀಡಿದೆ.

"ಬಿಕ್ಕಟ್ಟು ಏಳನೇ ವಾರಕ್ಕೆ ಕಾಲಿಟ್ಟಿರುವುದರಿಂದ ಡೋಕ್ಲಾಂ ಬಿಕ್ಕಟ್ಟನ್ನು ಶಾಂತಿಯುತವಾಗಿ ಪರಿಹರಿಸುವ ಏಲ್ಲ ಬಾಗಿಲುಗಳು ಮುಚ್ಚಲ್ಪಟ್ಟಿದೆ. ಎರಡು ಸೇನಾ ಪಡೆಗಳ ನಡುವಿನ ಸಂಘರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ.  ಚೀನದೊಂದಿಗಿನ ಯಾವುದೇ ಬಿಕ್ಕಟ್ಟು ನಿವಾರಿಸಲು ಹಾಗೂ ಅರ್ಥಪೂರ್ಣ ಮಾತುಕತೆಗೆ ಭಾರತ ತನ್ನ ಸೇನೆಯನ್ನು ಡೋಕ್ಲಾಂ ಪ್ರದೇಶದಿಂದ ಹಿಂದೆ ತೆಗೆಯುವ ಅಗತ್ಯತೆ ಇದೆ ಎಂದು ಪತ್ರಿಕೆ ಅಭಿಪ್ರಾಯಿಸಿದೆ.

ಡೋಕ್ಲಾಂ ವಿವಾದ ಶುರುವಾದಾಗಿನಿಂದಲೂ ಭಾರತದ ವಿರುದ್ಧ ಚೀನಾ ತನ್ನ ಪತ್ರಿಕೆಗಳ ಮೂಲಕವೇ ಆಕ್ರಮಣ, ಯುದ್ಧ ನಡೆಸುತ್ತಿದ್ದು, ಅಲ್ಲಿನ ಸರ್ಕಾರಿ ಪ್ರಾಯೋಜಿತ ಪತ್ರಿಕೆಗಳು ಈಗ "ಯುದ್ಧ ಸಿದ್ಧತೆ' ಶುರು ಮಾಡಿವೆ. ಚೀನಾ  ಸೇನೆ ಉತ್ತರಾಖಂಡ ಅಥವಾ ಕಾಶ್ಮೀರದ ಮೂಲಕ ಭಾರತದ ಮೇಲೆ ಆಕ್ರಮಣ ಮಾಡಬಹುದು ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com