ಆ.21ರಂದು ಸಂಭವಿಸಲಿದೆ ಶತಮಾನದ ಸಂಪೂರ್ಣ ಸೂರ್ಯಗ್ರಹಣ, ಭಾರತದಲ್ಲಿ ಗೋಚರವಿಲ್ಲ

ಶತಮಾನದ ಬಳಿಕ ಇದೇ ಮೊದಲ ಬಾರಿ ಇಡೀ ಅಮೆರಿಕವು ಸೋಮವಾರ ಖಗ್ರಾಸ ಸೂರ್ಯಗ್ರಹಣವನ್ನು ಕಾಣಲಿದೆ. ಇದನ್ನು ಗ್ರೇಟ್ ಅಮೆರಿಕನ್ ಸೋಲಾರ್ ಎಕ್ಲಿಪ್ಸ್ ಎಂದು ಬಣ್ಣಿಸಲಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಶತಮಾನದ ಬಳಿಕ ಇದೇ ಮೊದಲ ಬಾರಿ ಇಡೀ ಅಮೆರಿಕವು ಸೋಮವಾರ ಖಗ್ರಾಸ ಸೂರ್ಯಗ್ರಹಣವನ್ನು ಕಾಣಲಿದೆ. ಇದನ್ನು ಗ್ರೇಟ್ ಅಮೆರಿಕನ್ ಸೋಲಾರ್ ಎಕ್ಲಿಪ್ಸ್ ಎಂದು ಬಣ್ಣಿಸಲಾಗಿದೆ. 
ಅಮಾವಾಸ್ಯೆಗಳಂದು ಕಾಣುವ ಸೂರ್ಯಗ್ರಹಣವು ಈ ಹಿಂದೆ 1918ರಲ್ಲಿ ಖಗ್ರಾಸ ಆಗಿ ಇಡೀ ಅಮೆರಿಕದಾದ್ಯಂತ ಗೋಚರಿಸಿತ್ತು. ಇದಾದ ಬಳಿಕ ಇದೇ ಮೊದಲ ಬಾರಿ ಇಡೀ ಅಮೆರಿಕದಲ್ಲಿ ಸೂರ್ಯನು ಹಗಲಲ್ಲೇ ಮರೆಯಾಗಲಿದ್ದಾನೆ. 
1991ರಲ್ಲಿ ಕೊನೆಯ ಬಾರಿ ಅಮೆರಿಕದಲ್ಲಿ ಖಗ್ರಾಸ ಸೂರ್ಯ ಗ್ರಹಣ ಗೋಚರಿಸಿತ್ತು. ಆದರೆ, ಆ ಸಲ ಇಡೀ ಅಮೆರಿಕದಲ್ಲಿ ಗ್ರಹಣ ಗೋಚರಿಸದೇ ಹವಾಯಿ ದ್ವೀಪಗಳಲ್ಲಿ ಮಾತ್ರ ಕಂಡಿತ್ತು. ಒಟ್ಟಾರೆ ಗ್ರಹಣದ ಅವಧಿ ಸುಮಾರು 3 ತಾಸಿನದ್ದಾಗಿದೆ. ಚಂದ್ರನು ಸೂರ್ಯನು ಮೇಲೆ ಬಂದಾಗ ಸೂರ್ಯಗ್ರಹಣ ಸುಮಾರು 3 ನಿಮಿಷಗಳ ಕಾಲ ಸಂಪೂರ್ಣ ಖಗ್ರಾಸ ಆಗಿ ಕಾಣಲಿದೆ. 
ಅಮೆರಿಕದ 14 ರಾಜ್ಯಗಳಲ್ಲಿ ಸೂರ್ಯಗ್ರಹಣದ ಪೂರ್ಣ ಪ್ರಮಾಣದ ಪರಿಣಾಮಗಳು ಕಂಡುಬರುತ್ತವೆ. ಇಲ್ಲಿ ಸೂರ್ಯನ ಬೆಳಕೂ ಸ್ವಲ್ಪವೂ ಭೂಮಿಗೆ ಬರದಂತೆ ಚಂದ್ರ ತಡೆಯುತ್ತಾನೆ. ದೇಶದ ಹೆಚ್ಚಿನ ಭಾಗದ ಜನರಿಗೆ ಈ ಗ್ರಹಣ ಸುಲಭದಲ್ಲಿ ನೋಡಲು ಸಾಧ್ಯವಾಗುತ್ತದೆ ಎಂದು ಫ್ಲಾರಿಡಾದ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿ ಜೇಮ್ಸ್ ವೆಬ್ ತಿಳಿಸಿದ್ದಾರೆ.
ಇನ್ನು ಈ ಬಾರಿ ಸಂಭವಿಸುತ್ತಿರುವ ಈ ಖಗ್ರಾಸ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಿದರೆ ಅಪಾಯ. ಇದರಿಂದ ಕಣ್ಣಿನ ಅಕ್ಷಿಪಟಲ ಸುಟ್ಟು ಹೋಗಬಹುದು ಅಥವಾ ಕಣ್ಣಿನಲ್ಲಿ ಶಾಶ್ವತ ಅಂಧತ್ವ ಕಲೆಗಳು ಉಂಟಾಗಬಹುದು ಎಂದು ಪರಿಣಿತರು ಎಚ್ಚರಿಕೆ ನೀಡಿದ್ದಾರೆ. 
ಭಾರತದಲ್ಲಿ ಕಾಣಿಸದು: 
ಅಮೆರಿಕದಾದ್ಯಂತ ಕಾಣಿಸು ಈ ಗ್ರಹಣ ಭಾರತ ಹಾಗೂ ವಿಶ್ವದ ಇತರ ಅನೇಕ ಭಾಗಗಳಲ್ಲಿ ಕಾಣಿಸದು. ಹೀಗಾಗಿ ಭಾರತದಲ್ಲಿ ಯಾವುದೇ ಗ್ರಹಣಾಚರಣೆ ಇರುವುದಿಲ್ಲ. ಕಳೆದ ಆಗಸ್ಟ್ 7 ರಂದು ಭಾರತದಲ್ಲಿ ಖಂಡಗ್ರಾಸ ಚಂದ್ರಗ್ರಹಣ ಸಂಭವಿಸಿತ್ತು. ಇನ್ನು ಜನವರಿ 31 ರಂದು ಭಾರತದಲ್ಲಿ ಖಗ್ರಾಸ್ ಚಂದ್ರಗ್ರಹಣ ಸಂಭವಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com