ವಿಶ್ವಸಂಸ್ಥೆ ಮತ್ತು ಜಗತ್ತಿನ ಶಕ್ತಿ ಶಾಲಿ ರಾಷ್ಟ್ರಗಳ ಎಚ್ಚರಿಕೆಯ ನಡುವೆಯೂ ಪಯೊಂಗ್ ಯಾಂಗ್ ಮೂರು ಅಣ್ವಸ್ತ್ರ ಕ್ಷಿಪಣಿಗಳನ್ನು ಪೂರ್ವ ಸಮುದ್ರದತ್ತ ಉಡಾಯಿಸಿ ಪುನಃ ಭೀತಿಯ ವಾತಾವರಣ ಮೂಡಿಸಿದೆ. ಇನ್ನು ಉತ್ತರ ಕೊರಿಯಾ ಮೂರು ಕ್ಷಿಪಣಿಗಳ ಪ್ರಯೋಗ ನಡೆಸಿರುವುದನ್ನು ಅಮೆರಿಕ ಮಿಲಿಟರಿ ಮತ್ತು ದಕ್ಷಿಣ ಕೊರಿಯಾದ ಉನ್ನತಾಧಿಕಾರಿಗಳು ಖಚಿತಪಡಿಸಿದ್ದಾರೆ.