ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಆಸೀಫ್
ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಆಸೀಫ್

ಸಿಂಧೂ ನದಿ ವಿವಾದ: ಭಾರತದ ಏಕಪಕ್ಷೀಯ ಯೋಜನೆಗಳು ಸ್ವೀಕಾರ್ಹವಲ್ಲ- ಪಾಕಿಸ್ತಾನ

ಸಿಂಧೂ ನದಿ ನೀರು ಹಂಚಿಕೆ ವಿವಾದ ಸಂಬಂಧ ಭಾರತದ ಏಕಪಕ್ಷೀಯವಾಗಿ ಯೋಜನೆಗಳನ್ನು ರೂಪಿಸುತ್ತಿದ್ದು, ಇದು ಸ್ವೀಕಾರ್ಹವಲ್ಲ ಎಂದು ಪಾಕಿಸ್ತಾನ ಮಂಗಳವಾರ ಹೇಳಿದೆ...
ಇಸ್ಲಾಮಾಬಾದ್: ಸಿಂಧೂ ನದಿ ನೀರು ಹಂಚಿಕೆ ವಿವಾದ ಸಂಬಂಧ ಭಾರತದ ಏಕಪಕ್ಷೀಯವಾಗಿ ಯೋಜನೆಗಳನ್ನು ರೂಪಿಸುತ್ತಿದ್ದು, ಇದು ಸ್ವೀಕಾರ್ಹವಲ್ಲ ಎಂದು ಪಾಕಿಸ್ತಾನ ಮಂಗಳವಾರ ಹೇಳಿದೆ. 
ಸಿಂಧೂ ನದಿ ನೀರು ಹಂಚಿಕೆ ವಿವಾದ ಸಂಬಂಧ ಇಸ್ಟಿಟ್ಯೂಟ್ ಆಫ್ ಸ್ಟ್ರಾಟಜಿಕ್ ಸ್ಟಡೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಆಸೀಫ್ ಅವರು, ಸಿಂಧೂ ನದಿ ನೀರು ಹಂಚಿಕೆ ಕುರಿತಂತೆ ಭಾರತದ ಜೊತೆಗೆ ಆಗಿರುವ ಒಪ್ಪಂದವನ್ನು ಪಾಕಿಸ್ತಾನ ಜವಾಬ್ದಾರಿಯತವಾಗಿ ಹಾಗೂ ಗೌರವಯುತವಾಗಿ ಪಾಲನೆ ಮಾಡುತ್ತಿದೆ. ವಿವಾದ ಸಂಬಂಧ ಭಾರತ ಏಕಪಕ್ಷೀಯವಾಗಿ ಯೋಜನೆಗಳನ್ನು ರೂಪಿಸಿದ್ದೇ ಆದರೆ, ಅದನ್ನು ಪಾಕಿಸ್ತಾನ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. 
ಸಿಂಧೂ ನದಿ ಬಳಿ ಭಾರತ ಜಲವಿದ್ಯುತ್ ಸ್ಥಾವರಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಈ ಮೂಲಕ ಜಲ ವಿವಾದ ವಿಚಾರದಲ್ಲಿ ಭಾರತ ಗಂಭೀರವಾದ ಕದನಗಳಿಗೆ ಇಳಿಯುತ್ತಿದೆ. ಸಿಂಧೂ ನದಿ ವಿವಾದ ಸೇರಿದಂತೆ ಎಲ್ಲಾ ವಿಚಾರಗಳನ್ನೂ ಬಗೆಹರಿಸಿಕೊಳ್ಳಲು ಪಾಕಿಸ್ತಾನ ಮುಂದಾಗಿದ್ದು, ಮಾತುಕತೆ ಮೂಲಕ ವಿವಾದಗಳನ್ನು ಬಗೆಹರಿಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿತ್ತು. ವಿವಾದ ಇತ್ಯರ್ಥಗೊಳಿಸುವಲ್ಲಿ ಭಾರತ ಉದ್ದೇಶಪೂರ್ವಕವಾಗಿ ತಡ ಮಾಡುತ್ತಿದ್ದು, ವಿವಾದ ಸಂಬಂಧ ಕೂಡಲೇ ವಿಶ್ವಬ್ಯಾಂಕ್ ನಿರ್ಣಾಯಕ ಪಾತ್ರವಹಿಸಬೇಕಿದೆ ಎಂದು ತಿಳಿಸಿದ್ದಾರೆ. 
ಚೆನಾಬ್ ನದಿಗೆ ಒಂದು ಸಾವಿರ ಮೆ.ವಾ ಸಾಮರ್ಥ್ಯದ ಪಕುಲ್ ದುಲ್ ಸ್ಥಾವರ, ಚೆನಾಬ್ ನ ಉಪನದಿಗಳಾಗಿರುವ ಮಿಯಾರ್ ನಲ್ಲಾ ನದಿಗೆ 120 ಮೆ.ವಾ ಸಾಮರ್ಥ್ಯ ಹಾಗೂ ಕಲ್ನಾಯ್ ನದಿಗೆ 43 ಮೆ.ವಾ ಸಾಮರ್ಥ್ಯದ ಜಲವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಭಾರತ ಯೋಜನೆ ಸಿದ್ಧಪಡಿಸಿದೆ. ಆದರೆ, ಈ ಜಲವಿದ್ಯುತ್ ಸ್ಥಾವರಗಳ ನಿರ್ಮಾಣ 1960ರ ಸಿಂಧೂನದಿ ಒಪ್ಪಂದದ ಉಲ್ಲಂಘನೆಯಾಗುತ್ತದೆ ಎಂದು ಪಾಕಿಸ್ತಾನ ವಾದಿಸಿತ್ತು. 

Related Stories

No stories found.

Advertisement

X
Kannada Prabha
www.kannadaprabha.com