ಡೋಕ್ಲಾಂನಲ್ಲಿ ಗಸ್ತು ಪಡೆ ಹೆಚ್ಚಿಸಿ, ಗಡಿ ಪ್ರದೇಶದ ಪ್ರತೀ ಇಂಚು ಭೂಮಿಯನ್ನೂ ರಕ್ಷಿಸುತ್ತೇವೆ: ಚೀನಾ ಸೇನೆ

ವಿವಾದಿತ ಡೋಕ್ಲಾಮ್ ಗಡಿಯಲ್ಲಿ ಸೇನೆಯ ಶಕ್ತಿಯನ್ನು ಹೆಚ್ಚಿಸಲು ಹಾಗೂ ರಕ್ಷಣಾ ಬಲವನ್ನು ಹೆಚ್ಚಿಸಲು ಇಂಚಿಂಚೂ ಭೂಮಿಯಲ್ಲೂ ಭದ್ರತಾಪಡೆಗಳನ್ನು ನಿಯೋಜಿಸಲಾಗುತ್ತದೆ ಎಂದು ಪಿಎಲ್ಎ (ಪೀಪಲ್ಸ್ ಲಿಬರೇಶನ್ ಆರ್ಮಿ) ಗುರುವಾರ...
ಚೀನಾ ಸೇನೆ (ಸಂಗ್ರಹ ಚಿತ್ರ)
ಚೀನಾ ಸೇನೆ (ಸಂಗ್ರಹ ಚಿತ್ರ)
ಬೀಜಿಂಗ್: ವಿವಾದಿತ ಡೋಕ್ಲಾಮ್ ಗಡಿಯಲ್ಲಿ ಸೇನೆಯ ಶಕ್ತಿಯನ್ನು ಹೆಚ್ಚಿಸಲು ಹಾಗೂ ರಕ್ಷಣಾ ಬಲವನ್ನು ಹೆಚ್ಚಿಸಲು ಇಂಚಿಂಚೂ ಭೂಮಿಯಲ್ಲೂ ಭದ್ರತಾಪಡೆಗಳನ್ನು ನಿಯೋಜಿಸಲಾಗುತ್ತದೆ ಎಂದು ಪಿಎಲ್ಎ (ಪೀಪಲ್ಸ್ ಲಿಬರೇಶನ್ ಆರ್ಮಿ) ಗುರುವಾರ ಹೇಳಿಕೊಂಡಿದೆ. 
ಡೋಕ್ಲಾಮ್ ವಿವಾದ ಸಂಬಂಧ ಹೇಳಿಕೆ ನೀಡಿರುವ ಚೀನಾ ರಾಷ್ಟ್ರೀಯ ರಕ್ಷಣಾ ಸಚಿಚವಾಲಯದ ವಕ್ತಾರ ಕರ್ನಲ್ ರೆನ್ ಗುವಾಕಿಯಾಂಗ್ ಅವರು, ದೇಶದ ಸಾರ್ವಭೌಮತ್ವ ಹಾಗೂ ಭದ್ರತೆಯನ್ನು ಕಾಪಾಡುವ ಸಲುವಾಗಿ ಡೋಕ್ಲಾಮ್ ಗಡಿಯಲ್ಲಿ ಚೀನಾ ಸಶಸ್ತ್ರ ಪಡೆಗಳು ಗಸ್ತು ತಿರುವುದನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ. 
ಡೋಕ್ಲಾಮ್ ಗಡಿ ವಿವಾದ ಉಭಯ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಹೆಚ್ಚಾದ ಬಳಿಕ ಚೀನಾ ಸೇನೆ ಗಡಿ ಮೇಲೆ ಹೆಚ್ಚಿನ ಕಣ್ಗಾವಲಿರಿಸಿದ್ದು, ಪರಿಸ್ಥಿತಿಯ ಮೇಲೆ ಹೆಚ್ಚಿನ ಗಮನ ಹಿರಿಸಿ ಗಡಿ ನಿಯಂತ್ರಣಗಳನ್ನು ಬಲಪಡಿಸಲು ತುರ್ತು ಕ್ರಮಗಳನ್ನು ಕೈಗೊಂಡಿದೆ. ಡೋಕ್ಲಾಮ್ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಚೀನಾ ರಾಜತಾಂತ್ರಿಕ ಮಾರ್ಗವನ್ನು ಬಳಕೆ ಮಾಡಿತ್ತು ಎಂದು ತಿಳಿಸಿದ್ದಾರೆ. 
ಇದೇ ವೇಳೆ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದ್ದರೂ ಚೀನಾ ಸೇನೆ ಏಕೆ ದಿಟ್ಟಉತ್ತರವನ್ನು ನೀಡಲಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ಚೀನಾ ಸೇನೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿವಾದ ಸಂಬಂಧ ಉದ್ದೇಶಿತ ಸಿದ್ಧತೆಗಳ ಬಗ್ಗೆ ಒಂದೊಂದು ಕ್ಷಣ ಕೂಡ ನಾವು ಪಶ್ಚಾತ್ತಾಪವನ್ನು ಪಟ್ಟಿದ್ದೇವೆ. ಪರ್ವತಗಳು ಹಾಗೂ ನದಿಗಳು, ತಾಯಿನಾಡಿನ ಒಂದು ಸಣ್ಣ ಇಂಚನ್ನು ಕಳೆದುಕೊಳ್ಳಲು ನಾವು ಬಿಡುವುದಿಲ್ಲ. ಪ್ರಾದೇಶಿಕ ಸಮಗ್ರತೆ ಹಾಗೂ ರಾಷ್ಟ್ರೀಯ ಸಾರ್ವಭೌಮತ್ವದ ರಕ್ಷಿಸಲು ಚೀನಾ ಸೇನೆ ಪಣತೊಟ್ಟಿದೆ. ಡೋಕ್ಲಾಮ್ ಗಡಿಯ ಒಂದು ಇಂಚು ಭೂಮಿಯನ್ನು ಬಿಡುವುದಿಲ್ಲ. ಪ್ರತೀ ಇಂಚು ಭೂಮಿಯನ್ನು ರಕ್ಷಣೆ ಮಾಡುತ್ತೇವೆಂದಿದ್ದಾರೆ. 
ಡೋಕ್ಲಾಮ್ ಗಡಿ ರಕ್ಷಿಸಲು ತುರ್ತು ಪ್ರತಿಕ್ರಿಯಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಚೀನಾ ಪಡೆಗಳು ಕಾರ್ಯಾಚರಣೆಗಳು ಮುಂದುವರೆಸಿವೆ. ಡೋಕ್ಲಾಮ್ ವಿವಾದ ಇತ್ಯರ್ಥಪಡಿಸಲು ಚೀನಾ ಸೇನಾಪಡೆ ಪ್ರಮುಖ ಪಾತ್ರವನ್ನುವಹಿಸಿದೆ ಎಂದು ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com