ಕರಾಚಿಯಲ್ಲಿ ಲಂಗರು ಹಾಕಿದ್ದ ಚೀನಾದ ಶಾಂಗ್ ಸಬ್ ಮೆರಿನ್ ಸಾಮರ್ಥ್ಯವೇನು ಗೊತ್ತೆ?

ಕರಾಚಿಯಲ್ಲಿ ಲಂಗರು ಹಾಕುವ ಮೂಲಕ ಹಲವು ಶಂಕೆಗಳಿಗೆ ಕಾರಣವಾಗಿದ್ದ ಚೀನಾದ ಅತ್ಯಾಧುನಿಕ ಜಲಾಂತರ್ಗಾಮಿ ಶಾಂಗ್ ನ ಬಗ್ಗೆ ನೀವು ತಿಳಿಯಬೇಕಾದ ಅಂಶಗಳು ಇಲ್ಲಿವೆ.
ಚೀನಾದ ಶಾಂಗ್ ಜಲಾಂತರ್ಗಾಮಿ
ಚೀನಾದ ಶಾಂಗ್ ಜಲಾಂತರ್ಗಾಮಿ

ನವದೆಹಲಿ: ಕರಾಚಿಯಲ್ಲಿ ಲಂಗರು ಹಾಕುವ ಮೂಲಕ ಹಲವು ಶಂಕೆಗಳಿಗೆ ಕಾರಣವಾಗಿದ್ದ ಚೀನಾದ ಅತ್ಯಾಧುನಿಕ ಜಲಾಂತರ್ಗಾಮಿ ಶಾಂಗ್ ನ ಬಗ್ಗೆ ನೀವು ತಿಳಿಯಬೇಕಾದ ಅಂಶಗಳು ಇಲ್ಲಿವೆ.

ಕರಾಚಿಯಲ್ಲಿ ನಿಯೋಜನೆಗೊಂಡಿದ್ದ ಚೀನಾದ ಎರಡು ಸಬ್ ಮೆರಿನ್ ಗಳು ಅಲ್ಲಿ ಲಂಗರು ಹಾಕಿದ್ದೇಕೆ ಎಂಬ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಭಾರತದಲ್ಲಿರುವ ಅತ್ಯಾಧುನಿಕ ಸಬ್ ಮೆರಿನ್ ಗಳ ಕುರಿತು ಮಾಹಿತಿ  ಕಲೆಹಾಕುವ ಸಂಬಂಧ ಈ ಜಲಾಂತರ್ಗಾಮಿ ಕರಾಚಿ ಬಂದರಿನಲ್ಲಿ ಲಂಗರು ಹಾಕಿತ್ತು ಎಂಬುದು ಮತ್ತೊಂದು ವಾದ. ಆದರೆ ಕರಾಚಿ ಬಂದರಿನಲ್ಲಿದ್ದುಕೊಂಡೇ ಭಾರತದಲ್ಲಿರುವ ಜಲಾಂತರ್ಗಾಮಿಯ ಮಾಹಿತಿಗಳನ್ನು ತಿಳಿಯುವ  ಸಾಮರ್ಥ್ಯ ಚೀನಾದ ಶಾಂಗ್ ಜಲಾಂತರ್ಗಾಮಿಗಿದೆಯೇ ಎಂಬ ಮತ್ತೊಂದು ಅನುಮಾನ ಮೂಡುತ್ತಿದೆ. ಹಾಗಾದರೇ ಚೀನಾ ಕರಾಚಿಯಲ್ಲಿ ಲಂಗರು ಹಾಕಿಸಿದ್ದ ಶಾಂಗ್ ಜಲಾಂತರ್ಗಾಮಿಗಳ ಸಾಮರ್ಥ್ಯವೇನು?

ಅಣ್ವಸ್ತ್ರ ಚಾಲಿತ ಸಬ್ ಮೆರಿನ್
ಚೀನಾ ಕರಾಚಿಯಲ್ಲಿ ಲಂಗರು ಹಾಕಿಸಿದ್ದ ಶಾಂಗ್ ಜಲಾಂತರ್ಗಾಮಿ ಅತ್ಯಾಧುನಿಕ ಸಬ್ ಮೆರಿನ್ ಆಗಿದ್ದು, ಅಣ್ವಸ್ತ್ರ ಚಾಲಿತ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 7 ಸಾವಿರ ಟನ್ ತೂಕದ ಈ ಜಲಾಂತರ್ಗಾಮಿ 6 ಲಘು  ಕ್ಷಿಪಣಿಗಳನ್ನು ನೀರಿನ ಆಳದಿಂದಲೇ ಹಾರಿಸುವ ತಂತ್ರಜ್ಞಾನವನ್ನು ಹೊಂದಿದೆ. ಇದರಲ್ಲಿನ ನ್ಯೂಕ್ಲಿಯರ್ ರಿಯಾಕ್ಟರ್ ಸಾಮರ್ಥ್ಯ ಅಗಾಧವಾಗಿರುವ ಕಾರಣ ಹತ್ತಾರು ಸಾವಿರ ಕಿ.ಮೀ.ವರೆಗೆ ಇವು ನಿರಂತರವಾಗಿ ಚಲಿಸಬಲ್ಲವು.

ಇವು ನೀರಿನ ಆಳದಲ್ಲಿ ಚಲಿಸುತ್ತಿದ್ದಾಗ ಸಾಮಾನ್ಯ ರಾಡಾರ್ ​ಗಳು ಗುರುತಿಸಲು ಸಾಧ್ಯವಾಗುವುದಿಲ್ಲ. ಎರಡೂ ಸಬ್​ ವೆುರೀನ್​ಗಳು ಲಘು ಕ್ಷಿಪಣಿ ಉಡಾವಣಾ ಸಾಮರ್ಥ್ಯ ಹೊಂದಿದ್ದು, ಹತ್ತಾರು ಕಿ.ಮೀ. ದೂರದಲ್ಲಿರುವಾಗಲೇ ಯುದ್ಧ  ಹಡಗುಗಳನ್ನು ಹೊಡೆದುರುಳಿಸಬಲ್ಲವು. ಜತೆಗೆ ನೂರಾರು ಕಿ.ಮೀ. ದೂರದ ಭೂ ಭಾಗದ ಮೇಲೂ ಕ್ಷಿಪಣಿ ದಾಳಿ ನಡೆಸಬಲ್ಲವು.

ನೌಕೆಯಲ್ಲಿರುವ ಸೋನಾರ್ ವ್ಯವಸ್ಥೆಯಿಂದಾಗಿ ಹತ್ತಾರು ಕಿ.ಮೀ ದೂರದಲ್ಲಿರುವ ಶತ್ರುಪಾಳಯದ ನೌಕೆಗಳನ್ನು ಗುರುತಿಸಿ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸುತ್ತದೆ. ನೀರಿನಲ್ಲಿರುವಾಗ ಈ ನೌಕೆ ಅತ್ಯಂತ ಕಡಿಮೆ  ಪ್ರಮಾಣದಲ್ಲಿ ಶಬ್ಧ ಮಾಡುವುದರಿಂದ ಸಾಮಾನ್ಯವಾಗಿ ಈ ನೌಕೆಗಳನ್ನು ಗುರುತಿಸುವುದು ಕಷ್ಟಸಾಧ್ಯ. ಹೀಗಾಗಿಯೇ ಭಾರತ ಕರಾಚಿಯಲ್ಲಿ ಲಂಗರು ಹಾಕಿದ್ದ ಈ ಶಾಂಗ್ ನೌಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com