ಪಾಕಿಸ್ತಾನದಿಂದ ಅಣುಯುದ್ಧದ ಅಪಾಯ ಸೃಷ್ಟಿಸುವ ಕೆಲಸ: ಅಮೆರಿಕ ಕಿಡಿ

ಅಮೆರಿಕದ ಉಪಾಧ್ಯಕ್ಷ ಜೋಯೆ ಬಿಡನ್ ಪಾಕಿಸ್ತಾನ, ಉತ್ತರ ಕೊರಿಯಾ, ರಷ್ಯಾ ಸೇರಿದಂತೆ ಕೆಲವು ರಾಷ್ಟ್ರಗಳು ಅಣುಯುದ್ಧ ನಡೆಯುವಂತಹ ಕೆಲಸಗಳನ್ನು ಮಾಡಿವೆ ಎಂದು ಕಿಡಿಕಾರಿದ್ದಾರೆ.
ಜೋಯೆ ಬಿಡನ್
ಜೋಯೆ ಬಿಡನ್
Updated on: 
ವಾಷಿಂಗ್ ಟನ್: ಅಮೆರಿಕದ ಕಾಂಗ್ರೆಸ್ ನಲ್ಲಿ ಅಣ್ವಸ್ತ್ರ ಭಯೋತ್ಪಾದನೆ ಬಗ್ಗೆ ಮಾತನಾಡಿರುವ ಅಮೆರಿಕದ ಉಪಾಧ್ಯಕ್ಷ ಜೋಯೆ ಬಿಡನ್, ಪಾಕಿಸ್ತಾನ, ಉತ್ತರ ಕೊರಿಯಾ, ರಷ್ಯಾ ಸೇರಿದಂತೆ ಕೆಲವು ರಾಷ್ಟ್ರಗಳು ಅಣುಯುದ್ಧ ನಡೆಯುವಂತಹ ಕೆಲಸಗಳನ್ನು ಮಾಡಿವೆ ಎಂದು ಕಿಡಿಕಾರಿದ್ದಾರೆ. 
ಪಾಕಿಸ್ತಾನ, ಉತ್ತರ ಕೊರಿಯಾದ ಕೆಲವು ನಡೆಗಳಿಂದ ಯೂರೋಪ್, ದಕ್ಷಿಣ ಏಷ್ಯಾ, ಪೂರ್ವ ಏಷ್ಯಾಗಳಲ್ಲಿ ಪ್ರಾದೇಶಿಕ ಅಣಿಯುದ್ಧ ನಡೆಯುವ ಅಪಾಯ ಎದುರಾಗಿದೆ, ಇದನ್ನು ಮುಂಬರುವ ಅಮೆರಿಕ ಸರ್ಕಾರ ಸಮರ್ಥವಾಗಿ ನಿರ್ವಹಿಸಬೇಕೆಂದು ಬಿಡನ್ ತಿಳಿಸಿದ್ದಾರೆ. 
ಒಂದೇ ಒಂದು ಅಣುಬಾಂಬ್ ಸಿಡಿದರೂ ಸಹ ಅದು ಅಪಾಯಕಾರಿಯಾಗಬಲ್ಲದು. ಆದ್ದರಿಂದಲೇ ಕಳೆದ 8 ವರ್ಷಗಳ ಹಿಂದೆ ನಾನು ಮತ್ತು ಬರಾಕ್ ಒಬಾಮ ಅಧಿಕಾರ ವಹಿಸಿಕೊಂಡಾಗ ಅಣುದಾಳಿಗಳನ್ನು ತಡೆಗಟ್ಟುವುದು ನಮ್ಮ ರಾಷ್ಟ್ರೀಯ ಅದ್ಯತೆಗಳಲ್ಲಿ ಒಂದಾಗಿತ್ತು ಎಂದು ಬಿಡನ್ ಹೇಳಿದ್ದಾರೆ. 
ಭಯೋತ್ಪಾದಕರಿಗೆ ಅಣು ಸಾಮಗ್ರಿಗಳನ್ನು ಶಸ್ತ್ರಾಸ್ತ್ರಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದಕ್ಕೆ ಒಂದೇ ರಾಷ್ಟ್ರದಿಂದ ಸಾಧ್ಯವಿಲ್ಲ ಎಂದು ಬಿಡನ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com