ಅಮೆರಿಕಾ ಅಧ್ಯಕ್ಷಆ ಡೊನಾಲ್ಡ್ ಟ್ರಂಪ್ ಅವರು ವಲಸೆ ವಿರೋಧಿ ನೀತಿಗಳನ್ನು ಘೋಷಿಸಿರುವುದಕ್ಕೆ ಹಾಗು ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಿಸುವುದಕ್ಕೆ ಮುಂದಾಗಿರುವ ಕ್ರಮವನ್ನು ಫೇಸ್ಬುಕ್ ಸಿಇಒ ಮಾರ್ಕ್
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷಆ ಡೊನಾಲ್ಡ್ ಟ್ರಂಪ್ ಅವರು ವಲಸೆ ವಿರೋಧಿ ನೀತಿಗಳನ್ನು ಘೋಷಿಸಿರುವುದಕ್ಕೆ ಹಾಗು ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಿಸುವುದಕ್ಕೆ ಮುಂದಾಗಿರುವ ಕ್ರಮವನ್ನು ಫೇಸ್ಬುಕ್ ಸಿಇಒ ಮಾರ್ಕ್ ಜ್ಯುಕರ್ಬರ್ಗ್ ಟೀಕಿಸಿದ್ದಾರೆ.
ಟ್ರಂಪ್ ಅಧಿಕಾರ ಸ್ವೀಕರಿಸಿ ಶ್ವೇತ ಭವನದಲ್ಲಿ ಕಳೆದ ಮೊದಲ ವಾರದಲ್ಲೇ ಮೆಕ್ಸಿಕೋ ಗಡಿಯಲ್ಲಿ ಗೋಡೆ ಕಟ್ಟಲು, ಇರಾನ್, ಇರಾಕ್, ಲಿಬಿಯಾ ಮತ್ತು ಸಿರಿಯಾದಿಂದ ವಲಸಿಗರಿಗೆ ತಡೆ ಹಾಕಲು ಟ್ರಂಪ್ ಘೋಷಿಸಿದ್ದಾರೆ.
"ನಿಮ್ಮೆಲ್ಲರ ಹಾಗೆ, ಅಧ್ಯಕ್ಷ ಟ್ರಂಪ್ ಅವರ ಇತ್ತೀಚಿನ ಆದೇಶಗಳು ನನಗು ಕಳವಳ ತಂದಿವೆ. ನಾವು ಈ ದೇಶವನ್ನು ಸುರಕ್ಷಿತಗೊಳಿಸಲು ಇಚ್ಛಿಸುತ್ತೇವೆ, ಆದರೆ ಇದಕ್ಕೆ ಬೆದರಿಕೆ ಒಡ್ಡುವ ಜನರ ಮೇಲೆ ಗಮನ ಹರಿಸುವುದರಿಂದ ಅದನ್ನು ಸಾಧಿಸಬೇಕು" ಎಂದು ಶುಕ್ರವಾರ ಜ್ಯುಕರ್ಬರ್ಗ್ ಫೇಸ್ಬುಕ್ ನಲ್ಲಿ ಬರೆದಿದ್ದಾರೆ.
ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆ ಸ್ಪಷ್ಟಪಡಿಸಿದ್ದ ಜ್ಯುಕರ್ಬರ್ಗ್, ಅಮೆರಿಕಾ 'ವಲಸಿಗರ ದೇಶ' ಎಂದು ಹೇಳಿದ್ದಾರೆ.
ತಮ್ಮ ಪೂರ್ವಿಕರೆಲ್ಲರೂ ಜರ್ಮನಿ, ಆಸ್ಟ್ರಿಯಾ ಮತ್ತು ಪೋಲೆಂಡ್ ಇಂದ ಬಂದವರು ಎಂದಿರುವ ಜ್ಯುಕರ್ಬರ್ಗ್ ತಮ್ಮ ಪತ್ನಿ ಪ್ರಿಸ್ಕಿಲ್ಲ ಚಾನ್ ಅವರ ಪೋಷಕರು ಚೈನಾ ಮತ್ತು ವಿಯೆಟ್ನಾಮ್ ನಿಂದ ಆಶ್ರಯಕ್ಕಾಗಿ ಬಂದ ವಲಸಿಗರು ಎಂದು ತಿಳಿಸಿದ್ದಾರೆ.
ವಲಸಿಗರಿಗೆ ಬಾಗಿಲನ್ನು ಸದಾ ತೆರೆದಿರಬೇಕು ಎಂದು ಕೂಡ ಅವರು ಆಗ್ರಹಿಸಿದ್ದಾರೆ. "ವಲಸಿಗರನ್ನು ನಾವು ಕೆಲವು ದಶಕಗಳ ಹಿಂದೆ ಹಿಂದಕ್ಕೆ ಕಳುಹಿಸಿದ್ದಾರೆ, ಪ್ರಿಸ್ಕಿಲ್ಲ ಕುಟುಂಬ ಇವೊತ್ತು ಇಲ್ಲಿರುತ್ತಿರಲಿಲ್ಲ" ಎಂದು ಕೂಡ ಅವರು ಹೇಳಿದ್ದಾರೆ.