ತೆಹ್ರಾನ್: ಏಳು ಮುಸ್ಲಿಂ ದೇಶಗಳ ನಾಗರಿಕರನ್ನು ಅಮೆರಿಕಾ ಪ್ರವೇಶವನ್ನು ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧಿಸಿದ ಬೆನ್ನಲ್ಲೇ ಇದೀಗ ಇರಾನ್ ಅಮೆರಿಕನ್ನರನ್ನು ದೇಶದಿಂದ ಹೊರಗೋಡಿಸುವ ನಿರ್ಧಾರವನ್ನು ಕೈಗೊಂಡಿದೆ.
ಡೊನಾಲ್ಡ್ ಟ್ರಂಪ್ ನಿನ್ನೆಯಷ್ಟೇ ಈ ಆದೇಶ ಹೊರಡಿಸಿದ್ದು ಇದಕ್ಕೆ ಜಗತ್ತಿನಾದ್ಯಂತ ವ್ಯಾಪಕ ಖಡನೆ ವ್ಯಕ್ತವಾಗಿದೆ. ಅಮೆರಿಕದ ಈ ನಿರ್ಧಾರಕ್ಕೆ ಇರಾನ್ ತಕ್ಕ ಪ್ರತ್ಯುತ್ತರ ನೀಡಿದೆ.
ಅಮೆರಿಕ ಪ್ರವೇಶ ನಿಷೇಧದ ಏಳು ಮುಸ್ಲಿಂ ದೇಶಗಳ ಪೈಕಿ ಇರಾನ್ ಸಹ ಒಂದಾಗಿದ್ದು, ಇರಾನ್ ನ ವಿದೇಶಾಂಗ ಇಲಾಖೆ ಟ್ರಂಪ್ ಅವರ ಈ ನಿರ್ಧಾರವನ್ನು ಅವಮಾನಕರ ಎಂದು ಬಣ್ಣಿಸಿದೆ. ಇದಕ್ಕಾಗಿ ಇರಾನ್ ನಲ್ಲಿರುವ ಅಮೆರಿಕನ್ನರನ್ನು ದೇಶದಿಂದ ಹೊರಗೋಡಿಸಲು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಿರ್ಧರಿಸಿದೆ.