ಡೋಕ್ಲಾಮ್ ವಿವಾದ: ಅಜಿತ್ ದೋವಲ್ ಒಬ್ಬ 'ಸಂಚುಕೋರ' ಎಂದ ಚೀನಾ ಮಾಧ್ಯಮ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪ್ರವಾಸಕ್ಕೆ 2 ದಿನ ಮುನ್ನ ಚೀನಾ ಕ್ಯಾತೆ ತೆಗೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪ್ರವಾಸಕ್ಕೆ 2 ದಿನ ಮುನ್ನ ಚೀನಾ ಕ್ಯಾತೆ ತೆಗೆದಿದೆ. 'ಪ್ರಮುಖ ಸಂಚುಕೋರನ' ಪ್ರವಾಸ ನಿರರ್ಥಕ ಎನ್ನುವ ಮೂಲಕ ಡೋಕ್ಲಾಮ್ ಬಿಕ್ಕಟ್ಟಿಗೆ ಅವರೇ ಕಾರಣ ಎಂದು ಚೀನಾ ದೂಷಿಸಿದೆ. 

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಉದ್ದೇಶಿತ ಚೀನಾ ಭೇಟಿ ಬ್ರಿಕ್ಸ್ ಸಮ್ಮೇಳನಕ್ಕಷ್ಟೇ ಸೀಮಿತವಾಗಿದ್ದು, ಗಡಿಯಲ್ಲಿ ಉದ್ಭವಿಸಿರುವ ಸಂಘರ್ಷದ ಪರಿಹಾರಕ್ಕಲ್ಲ ಎಂದು ಚೀನಾದ ಗ್ಲೋಬರ್ ಟೈಮ್ಸ್ ಸಂಪಾದಕೀಯ ಬರೆದುಕೊಂಡಿದೆ.

ಜುಲೈ.27 ಮತ್ತು 28 ರಂದು ನಡೆಯಲಿರುವ ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ಅಜಿತ್ ದೋವಲ್ ಅವರು ಬೀಜಿಂಗ್'ಗೆ ಭೇಟಿ ನೀಡಿಲಿದ್ದಾರೆ. ಭಾರತೀಯ ಮಾಧ್ಯಮಗಳು ಭೇಟಿ ವೇಳೆ ಡೋಕ್ಲಾಂ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಒತ್ತಡ ಹೇರುತ್ತಿವೆ ಎಂದು ಪತ್ರಿಕೆಯಲ್ಲಿ ಆರೋಪ ಮಾಡಲಾಗಿದೆ. 

ಗಡಿಯಲ್ಲಿ ಭಾರತ ನಿಯೋಜಿಸಿರುವ ಸೇನೆಯನ್ನು ಮೊದಲು ಹಿಂದಕ್ಕೆ ಕರೆಯಬೇಕು. ಸಿಕ್ಕಿಂ ಗಡಿಯಲ್ಲಿ ಭಾರತ-ಚೀನಾ ಸೇನೆ ನಿಯೋಜನೆಯಾಗಿರುವುದರ ಹಿಂದಿನ ಪ್ರಮುಖ ಸೂತ್ರಧಾರಿ ಅಜಿತ್ ದೋವಲ್, ದೋವರ್ ಭೇಟಿಯಿಂದ ಉಭಯ ರಾಷ್ಟ್ರಗಳ ನಡುವೆ ಉಂಟಾಗಿರುವ ಉದ್ವಿಗ್ನತೆ ಶಮನಗೊಳ್ಳುವ ಸಾಧ್ಯತೆಗಳಿವೆ ಎಂದು ಭಾರತೀಯ ಮಾಧ್ಯಮಗಳು ಹೆಚ್ಚಾಗಿ ನಂಬಿಕೆಯನ್ನಿಟ್ಟಿವೆ. 

ಆದರೆ, ವಿವಾದ ಸಂಬಂಧ ಬೀಜಿಂಗ್ ಜೊತೆಗೆ ಮಾತನಾಡಲು ಪ್ರಯತ್ನಿಸಿದ್ದೇ ಆದರೆ, ಈ ವಿಚಾರದಲ್ಲಿ ಅವರಿಗೆ ನಿರಾಸೆಯಾಗಿದೆ. ಭಾರತ ನಿರೀಕ್ಷಿಸಿರುವಂತೆ ದೋವ್ ಭೇಟಿಯಿಂದ ಉಭಯ ರಾಷ್ಟ್ರಗಳ ಪರಿಸ್ಥಿತಿ ಸುಧಾರಿಸುವುದಿಲ್ಲ. ದೋವಲ್ ಭೇಟಿಯಿಂದ ಸಮಸ್ಯೆ ಬಗೆಯಲಿದೆ ಎಂಬ ಭ್ರಮೆಯಿಂದ ಭಾರತ ಮೊದಲು ಹೊರಬರಬೇಕಿದೆ ಎಂದು ಬರೆದುಕೊಂಡಿದೆ. 
ಭಾರತ, ಚೀನಾ, ಭೂತಾನ್ ಗಡಿಗಳ ಸಂಗಮದಂತಹ ಸ್ಥಳದಲ್ಲಿ ಡೋಕ್ಲಾಮ್ ಇದ್ದು, ಅದು ತನಗೇ ಸೇರಿದ್ದು ಎಂದು ಚೀನಾ ವಾದಿಸುತ್ತಿರುವುದರಿಂದ ವಿವಾದ ಭುಗಿಲೆದ್ದಿದೆ. 

ವಿವಾದ ಸಂಬಂಧ ಹಲವು ದಿನಗಳಿಂದಲೂ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದೆ.  ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ಈ ಹಿಂದೆ ನಾಶ ಮಾಡಿದ್ದರು. ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿತ್ತು. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಜೂನ್‌ 6 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದೆ

ಭಾರತದ ಗಡಿ ರಕ್ಷಣಾ ದೃಷ್ಟಿಯಿಂದ ಭೂತಾನ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತ ಸಿಲಿಗುರಿ ಕಾರಿಡಾರ್ ನಿರ್ಮಿಸುತ್ತಿದೆ. ಒಂದು ವೇಳೆ ಈ ಕಾರಿಡಾರ್ ಪೂರ್ಣಗೊಂಡಿದ್ದೇ ಆದರೆ ಗಡಿಯಲ್ಲಿ ಚೀನಿ ಸೈನಿಕರು ಏನೇ  ಯೋಜನೆ ರೂಪಿಸಿದರೂ ಭಾರತಕ್ಕೆ ಆದರ ಮಾಹಿತಿ ಲಭ್ಯವಾಗುತ್ತದೆ. ಇನ್ನು ಇದೇ ಕಾರಿಡಾರ್ ಗೆ ಹೊಂದಿಕೊಂಡಂತೆ ಭಾರತೀಯ ಪಡೆಗಳ ಶಿಬಿರವಿದ್ದು, ಇದೇ ಕಾರಣಕ್ಕೆ ಚೀನಾ ಕೂಡ ಡೋಕ್ಲಾಮ್ ಸಮೀಪದಲ್ಲೇ ದಿಢೀರ್ ರಸ್ತೆ  ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನು ಯಾವಾಗ ಭಾರತೀಯ ಸೈನಿಕರು ವಿರೋಧಿಸಿದರೋ ಆಗ ಚೀನೀ ಸೈನಿಕರು ಕಾಲುಕೆರೆದು ಸಂಘರ್ಷಕ್ಕೆ ಮುಂದಾಗಿದ್ದಾರೆ ಎಂದು ಹೇಳಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com