ಭಾರತ ಮತ್ತು ಚೀನಾ ನಡುವಿನ ಸೇನಾ ಘರ್ಷಣೆಯನ್ನು ಅಮೆರಿಕ ಪ್ರಚೋದಿಸುತ್ತಿದೆ: ಚೀನಾ ಮಾಧ್ಯಮ

ಅಮೆರಿಕ ಭಾರತಕ್ಕೆ ನೆರವಾಗಬೇಕು ಎಂದು ಲೇಖನ ಪ್ರಕಟಿಸುವ ಮೂಲಕ ಅಮೆರಿಕ ಭಾರತ ಮತ್ತು ಚೀನಾ ನಡುವಿನ ಸೇನಾ ಘರ್ಷಣೆಯನ್ನು ಪ್ರಚೋದಿಸುತ್ತಿದೆ ಎಂದು...
ಚೀನಾ-ಭಾರತ ಯೋಧರು
ಚೀನಾ-ಭಾರತ ಯೋಧರು
ನವದೆಹಲಿ: ಅಮೆರಿಕ ಭಾರತಕ್ಕೆ ನೆರವಾಗಬೇಕು ಎಂದು ಲೇಖನ ಪ್ರಕಟಿಸುವ ಮೂಲಕ ಅಮೆರಿಕ ಭಾರತ ಮತ್ತು ಚೀನಾ ನಡುವಿನ ಸೇನಾ ಘರ್ಷಣೆಯನ್ನು ಪ್ರಚೋದಿಸುತ್ತಿದೆ ಎಂದು ಚೀನಾ ಮಾಧ್ಯಮ ಆರೋಪಿಸಿದೆ. 
ಡೋಕ್ಲಾಂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಭಾರತ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮೆರಿಕ ಭಾರತಕ್ಕೆ ಬೆಂಬಲ ನೀಡುವ ಮೂಲಕ ಬೆಳೆಯುತ್ತಿರುವ ಚೀನಾದ ಆಕ್ರಮಣಕಾರಿಶೀಲ ಪ್ರವೃತ್ತಿಯನ್ನು ನಿಲ್ಲಿಸಬೇಕು ಎಂದು ಅಮೆರಿಕನ್ ಪಬ್ಲಿಕೇಷನ್ ವರದಿಯೊಂದನ್ನು ಪ್ರಕಟಿಸಿತ್ತು. 
ಕಳೆದ ಎರಡು ದಿನಗಳ ಹಿಂದಿನ ವರದಿಯನ್ನು ಕೇಂದ್ರಿಕರಿಸಿ ವರದಿಯೊಂದನ್ನು ಪ್ರಕಟಿಸಿರುವ ಚೀನಾ ಒಡೆತನದ ಗ್ಲೋಬಲ್ ಟೈಮ್ಸ್ ಪತ್ರಿಕೆ ಚೀನಾ ಮತ್ತು ಭಾರತ ನಡುವಿನ ಘರ್ಷಣೆಯ ಲಾಭ ಪಡೆದುಕೊಳ್ಳಲು ಹವಣಿಸುತ್ತಿದೆ ಎಂದು ಹೇಳಿದೆ. 
ಉಭಯ ದೇಶಗಳ ನಡುವೆ ಸಂಘರ್ಷಗಳು ಬಂದಾಗ ಅಮೆರಿಕ ತಾನು ಮಧ್ಯಸ್ಥಿಕೆ ವಹಿಸಿ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವುದಕ್ಕೆ ನಿಷ್ಪಕ್ಷಪಾತ ನಿಲವು ತೋರಿಸುವುದು ಅಪರೂಪವಾಗಿ ಕಾಣಿಸುತ್ತದೆ ಎಂದು ಗ್ಲೋಬಲ್ ಟೈಮ್ಸ್ ಪತ್ರಿಕೆ ಲೇಖನ ಪ್ರಕಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com