ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದ ಅಮೆರಿಕಾ: ಭಾರತ ಮತ್ತು ಚೀನಾಕ್ಕೆ ಇದು ಉಪಯೋಗ ಎಂದ ಟ್ರಂಪ್

ಹವಾಮಾನ ಬದಲಾವಣೆ ಕುರಿತು ಮಾಡಿಕೊಂಡ ಪ್ಯಾರಿಸ್ ಒಪ್ಪಂದದಿಂದ ಅಮೆರಿಕಾ ಹಿಂದೆ...
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ಹವಾಮಾನ ಬದಲಾವಣೆ ಕುರಿತು ಮಾಡಿಕೊಂಡ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಘೋಷಿಸಿದ್ದಾರೆ. ಹಿಂದಿನ ಬರಾಕ್ ಒಬಾಮಾ ಸರ್ಕಾರ ಮಾಡಿಕೊಂಡ ಪ್ಯಾರಿಸ್ ಒಪ್ಪಂದದಲ್ಲಿ ಬದಲಾವಣೆಗೆ ಅವಕಾಶವಿತ್ತು ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. 190ಕ್ಕೂ ಅಧಿಕ ದೇಶಗಳು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿವೆ.
ನಿನ್ನೆ ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಡೊನಾಲ್ಡ್ ಟ್ರಂಪ್, ಚೀನಾ, ಭಾರತದಂತಹ ದೇಶಗಳು ಈ ಒಪ್ಪಂದದಿಂದ ಅತ್ಯಂತ ಲಾಭ ಪಡೆದುಕೊಳ್ಳಲಿವೆ. ಆದರೆ ಒಪ್ಪಂದದಿಂದ ಅಮೆರಿಕಾದ ವ್ಯಾಪಾರ ಮತ್ತು ಉದ್ಯೋಗಗಳ ಮೇಲೆ ಪರಿಣಾಮ ಬೀರುವುದರಿಂದ ತಮ್ಮ ದೇಶಕ್ಕೆ ಯೋಗ್ಯವಾಗಿಲ್ಲ ಎಂದು ಹೇಳಿದ್ದಾರೆ.
ಪ್ಯಾರಿಸ್ ಒಪ್ಪಂದದಡಿಯಲ್ಲಿ ತನ್ನ ಬದ್ಧತೆಯನ್ನು ಈಡೇರಿಸಲು ಭಾರತ ಶತಕೋಟಿ ಡಾಲರ್ ಪಡೆದುಕೊಳ್ಳಲಿದೆ.
ಅಲ್ಲದೆ ಚೀನಾದೊಟ್ಟಿಗೆ ಮುಂದಿನ ವರ್ಷಗಳಲ್ಲಿ ಕಲ್ಲಿದ್ದಲು ಇಂಧನ ಘಟಕಗಳಿಗೆ ದ್ವಿಗುಣ ಮೊತ್ತದ ಹಣ ಪಡೆದುಕೊಳ್ಳಲಿದೆ ಎಂದರು. ಆದರೆ ಅಮೆರಿಕಾದ ನಿರ್ಧಾರವನ್ನು ವಿಶ್ವದ ಹಲವು ಮುಖಂಡರು ಖಂಡಿಸಿದ್ದಾರೆ. ಯುರೋಪಿಯನ್ ಕಮಿಷನ್ ಅಧ್ಯಕ್ಷ ಜೀನ್ ಕ್ಲಾಡ್ ಜಂಕರ್, ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಸಂಪೂರ್ಣ ತಪ್ಪು ಎಂದು ಟ್ವಿಟ್ಟರ್‍ನಲ್ಲಿ ಖಂಡಿಸಿದ್ದಾರೆ.
ಫ್ರಾನ್ಸ್, ಜರ್ಮನಿ ಮತ್ತು ಇಟೆಲಿ ದೇಶಗಳ ನಾಯಕರು ಜಂಟಿ ಹೇಳಿಕೆ ಹೊರಡಿಸಿದ್ದು, ಒಪ್ಪಂದವನ್ನು ಮತ್ತೆ ಮಾಡಿಕೊಳ್ಳುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಪ್ಯಾರಿಸ್ ಒಪ್ಪಂದವನ್ನು ಒಪ್ಪಿಕೊಂಡಿದ್ದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಟೀಕಿಸಿದ್ದು, ಇದರಿಂದ ಟ್ರಂಪ್ಸ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com