ಭಾರತಕ್ಕೆ ಎಸ್ ಸಿಒ ಶಾಶ್ವತ ಸದಸ್ಯತ್ವ: ಚೀನಾಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ!

ಕಜಕಿಸ್ತಾನದ ಆಸ್ತಾನಾದಲ್ಲಿ ಆರಂಭವಾಗಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಎಸ್ ಸಿಒ ಸದಸ್ಯತ್ವ ನೀಡಿದ್ದಕ್ಕಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಧನ್ಯವಾದ ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಅಸ್ತಾನಾ: ಕಜಕಿಸ್ತಾನದ ಆಸ್ತಾನಾದಲ್ಲಿ ಆರಂಭವಾಗಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಎಸ್ ಸಿಒ ಸದಸ್ಯತ್ವ ನೀಡಿದ್ದಕ್ಕಾಗಿ ಚೀನಾ  ಅಧ್ಯಕ್ಷ  ಕ್ಸಿ ಜಿನ್ ಪಿಂಗ್ ಅವರಿಗೆ ಧನ್ಯವಾದ ಹೇಳಿದರು.

ಶೃಂಗಸಭೆಯಲ್ಲಿ ಮಧ್ಯ ಏಷ್ಯಾದ ಪ್ರಮುಖ ರಾಷ್ಟ್ರಗಳ ನಾಯಕರು ಒಟ್ಟು ಗೂಡಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪರಸ್ಪರ ಶಭಾಶಯ ವಿನಿಮಯ  ಮಾಡಿಕೊಂಡರು. ಇದೇ ವೇಳೆ ಭಾರತಕ್ಕೆ ಶಾಂಘೈ ಸಹಕಾರ ಒಕ್ಕೂಟದ ಶಾಶ್ವತ ಸದಸ್ಯತ್ವ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಗೆ ಅಭಿನಂದನೆ ತಿಳಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ  ಮೋದಿ ಅವರು ಎರಡೂ ದೇಶಗಳ ಪ್ರಗತಿಯತ್ತ ಮುಖ ಮಾಡಿದ್ದು, ಪ್ರಮುಖ ಕ್ಷೇತ್ರಗಳಲ್ಲಿ ಸಾಕಷ್ಟು ಶ್ರಮಪಟ್ಟು ಅಭಿವೃದ್ಧಿ ಸಾಧಿಸಿದ್ದೇವೆ. ಎರಡೂ ದೇಶಗಳ ಯುವಜನತೆ ಸಕಾರಾತ್ಮಕ ಭವಿಷ್ಯವನ್ನು ಎದುರು ನೋಡುತ್ತಿದ್ದು,  ಸಾಕಷ್ಚು ಕ್ಷೇತ್ರಗಳಲ್ಲಿ ಸುಧಾರಣೆ ಅಗತ್ಯವಾಗಿದೆ. ಅಂತೇಯೆ ಭಾರತ ಕೈಗೊಂಡ ಸುಧಾರಣಾ ಕ್ರಮಗಳು ಫಲ ನೀಡುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಆರ್ಥಿಕತೆಯಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು  ಹೇಳಿದರು.

ಇಂದೂ ಕೂಡ ಸಭೆ ಮುಂದುವರೆಯಲಿದ್ದು, ಇಂದಿನ ಸಭೆಯಲ್ಲಿ ದಕ್ಷಿಣ ಏಷ್ಯಾ ಭಾಗದಲ್ಲಿ ವ್ಯಾಪಿಸುತ್ತಿರುವ ಭಯೋತ್ಪಾದನೆಯ ಬಗ್ಗೆ ಪ್ರಮುಖವಾಗಿ ನಾಯಕರು ಮಾತುಕತೆ ನಡೆಸಲಿದ್ಜಾರೆ. ಅಂತೆಯೇ ಇಂದು ಅಧಿಕೃತವಾಗಿ  ಭಾರತವನ್ನು ಎಸ್ ಸಿಒ (ಶಾಂಘೈ ಸಹಕಾರ ಸಂಘಟನೆ)ದ ಶಾಶ್ವತ ಸದಸ್ಯ ರಾಷ್ಟ್ರ ಎಂದು ಘೋಷಣೆ ಮಾಡುವ ಸಾಧ್ಯತೆ ಇದೆ.

ನವಾಜ್ ಷರೀಫ್ ಕುಶಲೋಪರಿ ವಿಚಾರಿಸಿದ ನರೇಂದ್ರ ಮೋದಿ
ಇನ್ನು ಇದೇ ವೇಳೆ ಶೃಂಗಸಭೆಯ ಮೊದಲ ದಿನ ಕಜಕಸ್ತಾನ ಅಧ್ಯಕ್ಷ ನೂರ್‌ ಸುಲ್ತಾನ್‌ ನಜರ್‌ ಬಯೇವ್‌ ಹಮ್ಮಿ ಕೊಂಡಿದ್ದ ಔತಣಕೂಟದಲ್ಲಿ ಮತ್ತು ನಂತರ ನಡೆದ ಸಾಂಸ್ಕೃತಿಕ ಕಾರ‍್ಯಕ್ರಮಗಳಲ್ಲಿ ಭಾರತದ ಪ್ರಧಾನಿ ನರೇಂದ್ರ  ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಪಾಲ್ಗೊಂಡಿದ್ದರು. ಪರಸ್ಪರ ಭೇಟಿ ಮಾಡಿದ ಅವರು ಶುಭಾಶಯ ವಿನಿಮಯ ಮಾಡಿಕೊಂಡರು. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು, ನಿಮ್ಮ ಆರೋಗ್ಯ ಹೇಗಿದೆ?  ತಾಯಿಯವರ ಆರೋಗ್ಯ ಹೇಗಿದೆ? ಎಂದು ಷರೀಫ್‌ರನ್ನು ಮೋದಿ ವಿಚಾರಿಸಿದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com