ಗಿಲ್ಗಿಟ್-ಬಾಲ್ಟಿಸ್ತಾನ್'ಗೆ 5ನೇ ಪ್ರಾಂತ್ಯ ಸ್ಥಾನಮಾನ ನೀಡಿದರೆ ಪ್ರತಿಭಟನೆ ನಡೆಸುತ್ತೇವೆ: ಬಲೂಚ್ ನಾಯಕರು

ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ್ ಗೆ ಪಾಕಿಸ್ತಾನ 5ನೇ ಪ್ರಾಂತ್ಯ ಸ್ಥಾನಮಾನ ನೀಡಿದ್ದೇ ಆದರೆ, ಸರ್ಕಾರ ವಿರುದ್ಧ ತೀವ್ರ ಪ್ರತಿಭಟನೆಗಳನ್ನು ನಡೆಸುತ್ತೇವೆಂದು ಬಲೂಚಿಸ್ತಾನದ ನಾಯಕರು ಗುರುವಾರ ಹೇಳಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಜಿನೀವಾ: ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ್ ಗೆ ಪಾಕಿಸ್ತಾನ 5ನೇ ಪ್ರಾಂತ್ಯ ಸ್ಥಾನಮಾನ ನೀಡಿದ್ದೇ ಆದರೆ, ಸರ್ಕಾರ ವಿರುದ್ಧ ತೀವ್ರ ಪ್ರತಿಭಟನೆಗಳನ್ನು ನಡೆಸುತ್ತೇವೆಂದು ಬಲೂಚಿಸ್ತಾನದ ನಾಯಕರು ಗುರುವಾರ ಹೇಳಿದ್ದಾರೆ. 
ಗಿಲ್ಗಿಟ್-ಬಾಲ್ಟಿಸ್ತಾನ್'ಗೆ 5ನೇ ಪ್ರಾಂತ್ರ್ಯ ಸ್ಥಾನಮಾನ ನೀಡಲು ಪಾಕಿಸ್ತಾನ ನಿರ್ಧಾರ ಕೈಗೊಂಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಲೂಚಿಸ್ತಾನ ಪ್ರತಿಭಟನಾಕಾರರು, ಪಾಕಿಸ್ತಾನ ಸರ್ಕಾರ ಈ ರೀತಿಯ ನಿರ್ಧಾರ ಕೈಗೊಂಡಿದ್ದೇ ಆದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನತೆಯ ತೀವ್ರ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 
ಇನ್ನು ಪಾಕಿಸ್ತಾನ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯುಕೆಪಿಎನ್'ಪಿ ವಿದೇಶಾಂಗ ಕಾರ್ಯದರ್ಶಿ ಜಮಿಲ್ ಮಖ್ಸೂದ್ ಅವರು, ಪ್ರತೀ ಹಂತದಲ್ಲಿಯೂ ಪಾಕಿಸ್ತಾನ ಅವಾಸ್ತವಿಕವಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ 5ನೇ ಪ್ರಾಂತ್ಯ ಸ್ಥಾನಮಾನ ನೀಡುವ ಕುರಿತಂತೆ ಮೊದಲು ಪಾಕಿಸ್ತಾನ ಸ್ಥಳೀಯರ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು. ಆದರೆ, ಪಾಕಿಸ್ತಾನ ಈ ರೀತಿಯ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ಹೇಳಿದ್ದಾರೆ. 
ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ 2 ಮಿಲಿಯನ್ ಗಿಂತಲೂ ಹೆಚ್ಚು ಜನಸಂಖ್ಯೆಯಿದ್ದು, ಈ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಅವಿಭಾಜ್ಯ ಭಾಗವಾಗಿದೆ. ಈ ಪ್ರದೇಶಗಳನ್ನು ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕ ಮಾಡಲು ಸಾಧ್ಯವಿಲ್ಲ. ಪಾಕಿಸ್ತಾನದ ಈ ರೀತಿಯ ನಿರ್ಧಾರ ಅವಾಸ್ತವಿಕವಾಗಿದೆ. ಯಾವುದೇ ಪ್ರಾಂತ್ಯಕ್ಕೆ ಸ್ಥಾನಮಾನ ನೀಡುವುದಕ್ಕೂ ಮುನ್ನ ಅಧಿಕಾರಿಗಳು ಸ್ಥಳೀಯರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು. ಆದರೆ, ಪಾಕಿಸ್ತಾನ ಈ ರೀತಿಯ ಯಾವುದೇ ವಿಧಾನಗಳನ್ನು ಪಾಲನೆ ಮಾಡಿಲ್ಲ. ಒಂದು ವೇಳೆ ನಿಯಮಗಳನ್ನು ಪಾಲಿಸದೆಯೇ ಪಾಕಿಸ್ತಾನ ನಿರ್ಧಾರ ಕೈಗೊಂಡಿರೆ ತೀವ್ರ ವಿರೋಧಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com