ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಾರತ 'ದೊಡ್ಡ ಚಿಂತನೆ'ಯೊಂದಿಗೆ 'ದೊಡ್ಡ ಪ್ರಗತಿ ಸಾಧಿಸುತ್ತಿದೆ': ಅಮೆರಿಕಾ ಪ್ರೊಫೆಸರ್

ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಭಾರತ ಬೃಹತ್ ಮಟ್ಟದಲ್ಲಿ ಯೋಚಿಸುತ್ತಿದ್ದು ಆ ದಾರಿಯಲ್ಲಿ...
Published on
ವಾಷಿಂಗ್ಟನ್: ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಭಾರತ ಬೃಹತ್ ಮಟ್ಟದಲ್ಲಿ ಯೋಚಿಸುತ್ತಿದ್ದು ಆ ದಾರಿಯಲ್ಲಿ ಮುನ್ನಡೆಯುತ್ತಿದೆ. ನೆರೆ ದೇಶ ಚೀನಾದಿಂದ ಭಾರೀ ಹಿಂದುಳಿದಿರುವುದರಿಂದ ಅಮೆರಿಕದಂತಹ ರಾಷ್ಟ್ರಗಳಿಗೆ ಸಾಕಷ್ಟು ಅವಕಾಶಗಳನ್ನು ನೀಡುವ ಮೂಲಕ ಮುನ್ನಡೆ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕಾದ ಶಾಸಕರು ಹೇಳಿದ್ದಾರೆ. 
ಭಾರತ ಹಲವು ಕ್ಷೇತ್ರಗಳಲ್ಲಿ ವೇಗವಾಗಿ ಮುನ್ನುಗ್ಗುತ್ತಿದೆ. ನವೀಕರಣ ಇಂಧನದಂತಹ ವಿಷಯಗಳ ಬಗ್ಗೆ ಭಾರತ ದೊಡ್ಡದಾಗಿ ಯೋಚಿಸುತ್ತಿದ್ದು, ಮುನ್ನಡೆ ಸಾಧಿಸುತ್ತಿದೆ ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮತ್ತು ಡೀನ್ ರಾಬರ್ಟ್ ಒರ್ರ್ ತಿಳಿಸಿದ್ದಾರೆ.
ಭಾರತೀಯರಿಗೆ ಸೌರ ಶಕ್ತಿ ಮತ್ತು ಪವನ ಶಕ್ತಿ ಬಗ್ಗೆ ಬಹಳ ದೊಡ್ಡ ಗುರಿಯಿದೆ. ಆ ಗುರಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿ ಹೂಡಿಕೆಯನ್ನು  ಆಕರ್ಷಿಸಲು ಭಾರತ ನೋಡುತ್ತಿದೆ. ಪ್ರಧಾನ ಮಂತ್ರಿ ಮೋದಿಯವರ ಸ್ಮಾರ್ಟ್ ಸಿಟಿ ಅಭಿಯಾನಗಳು ಅನೇಕ ಘಟಕಗಳನ್ನು ಹೊಂದಿವೆ. ಆದರೆ ಆರ್ಥಿಕ ಮತ್ತು ಅಭಿವೃದ್ಧಿಶೀಲ ವಿಷಯಕ್ಕೆ ಸಂಬಂಧಪಟ್ಟಂತೆ ಕಾರ್ಯತಂತ್ರ ದೃಷ್ಟಿ ಅಗತ್ಯವೆಂಬುದು ನನ್ನ ಅನಿಸಿಕೆ ಎಂದು ಅಮೆರಿಕಾ ಕಾಂಗ್ರೆಸ್ ನಲ್ಲಿ ಚರ್ಚೆಯ ವೇಳೆ ಒರ್ರ್ ಅಭಿಪ್ರಾಯಪಟ್ಟರು.
ನ್ಯೂಯಾರ್ಕ್ ಮಾಜಿ ಮೇಯರ್ ಮೈಕೆಲ್ ಬ್ಲೊಂಬರ್ಗ್ ಅವರೊಂದಿಗೆ ಕಳೆದ ವರ್ಷ ತಾನು ಭಾರತಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಹಲವು ಉನ್ನತ ಉದ್ಯಮಿಗಳನ್ನು ಭೇಟಿ ಮಾಡಿದ್ದೇನೆ. ಹವಾಮಾನ ಮತ್ತು ಅಂತರಿಕ್ಷ ಕ್ಷೇತ್ರದಲ್ಲಿ ಅವರು ಮಾಡುವ ಕೆಲಸಗಳ ಕುರಿತು ಮಾತನಾಡಿದ್ದೇನೆ ಎಂದರು.
ಮುಂದಿನ ನಾಲ್ಕು ವರ್ಷಗಳಲ್ಲಿ ಚೀನಾ ದೇಶ 360 ಡಾಲರ್ ನಷ್ಟು ಬೃಹತ್ ಮೊತ್ತ ಹೂಡಿಕೆ ಮಾಡುತ್ತಿದ್ದರೆ, ಭಾರತ ಸಾಕಷ್ಟು ಆಂತರಿಕ ಬಂಡವಾಳವನ್ನು ಸಾಕಷ್ಟು ಸಜ್ಜುಗೊಳಿಸುತ್ತದೆ. ಭಾರತ ಮತ್ತು ಚೀನಾ ಮಧ್ಯೆ ಇಂಧನ ವಲಯದಲ್ಲಿ ಪೈಪೋಟಿಯಿದೆ ಎಂದರು.
ಅಮೆರಿಕಾ ಸಂಯುಕ್ತ ಸಂಸ್ಥಾನ ತಾಂತ್ರಿಕವಾಗಿ ಮುಂದುವರಿದಿದ್ದು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡಲು ಸಾಕಷ್ಟು ಮಾರುಕಟ್ಟೆಯಿದೆ. ಆದರೆ ಇಂದು ಈ ಜಾಗತಿಕ ಪ್ರಬಲ ರಾಷ್ಟ್ರಗಳ ಜೊತೆಗೆ ಪೈಪೋಟಿ ನಡೆಸಲು ನಾವು ನಿರ್ಧಾರ ಮಾಡುತ್ತಿಲ್ಲ ಎಂದು ಶಾಸಕರಿಗೆ ಹೇಳಿದರು.
ಆರ್ಥಿಕಾಭಿವೃದ್ಧಿ ವಿಷಯಕ್ಕೆ ಬಂದಾಗ ಭಾರತೀಯರು ಕಡಿಮೆ ಬೇಸ್ ಲೈನ್ ನಿಂದ ಬಂದಿದ್ದು ಭಾರತೀಯರಿಗೆ ಇಂದು ಅವಕಾಶಗಳು ಸಾಕಷ್ಟಿದೆ. ಕೆಲವು ವಲಯಗಳಲ್ಲಿ ಅವರು ಬಹಳ ಕಾರ್ಯತಂತ್ರರಾಗಿದ್ದಾರೆ. ಅವರು ಐಟಿ ವಲಯಕ್ಕೆ ಹೆಚ್ಚು ಅವಲಂಬಿತರಾಗಿದ್ದಾರೆ.
ಭಾರತೀಯರು ಸೈಬರ್ ಸುರಕ್ಷತತೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.  ಅದು ಅವರಿಗೆ ಮುಖ್ಯ ಕೂಡ ಎಂದು ಒರ್ರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com