ಅಮೆರಿಕದಲ್ಲಿ ಭಾರತೀಯನ ಗುಂಡಿಟ್ಟು ಹತ್ಯೆ

ಅಮೆರಿಕದ ಕರೋಲಿನಾದಲ್ಲಿ ಭಾರತೀಯನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ...
ಗುಂಡಿನ ದಾಳಿ
ಗುಂಡಿನ ದಾಳಿ
Updated on
ನ್ಯೂಯಾರ್ಕ್: ಅಮೆರಿಕದ ಕರೋಲಿನಾದಲ್ಲಿ ಭಾರತೀಯನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಫಯೆಟ್ಟೆವಿಲ್ಲೆ ನಗರದ ನೈಟ್ಸ್ ಇನ್ ಮತ್ತು ಡೈಮಂಡ್ಝ್ ಜೆಂಟಲ್ಮೆನ್ಸ್ ಕ್ಲಬ್ ನ ಮಾಲೀಕ 40 ವರ್ಷದ ಆಕಾಶ್ ಆರ್ ತಲಟಿ ಅವರನ್ನು ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಇನ್ನು ಗುಂಡಿನ ದಾಳಿಯಲ್ಲಿ ನಾಲ್ವರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 
ಶೂಟ್ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಮಾರ್ಕೀಸ್ ಡೆವಿಟ್ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಡಿಟೆಕ್ಟಿವ್ ಜಮಾಲ್ ಲಿಟಲ್ ಜಾನ್ ತಿಳಿಸಿದ್ದಾರೆ. 
ಮೃತ ಆಕಾಶ್ ತಲಟಿ ಅವರು ಗುಜರಾತ್ ನ ಆನಂದ್ ಜಿಲ್ಲೆಯವರಾಗಿದ್ದಾರೆ. ಇನ್ನು ಶೂಟ್ ಔಟ್ ನಲ್ಲಿ ನಾಲ್ವರಿಗೆ ಗಾಯಗಳಾಗಿದ್ದು ಇಬ್ಬರ ಪರಿಸ್ಥಿತಿ ಗಂಭೀರವಾಗಿದ್ದು ಇನ್ನಿಬ್ಬರನ್ನು ಚಿಕಿತ್ಸೆ ನಂತರ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com