ಪಾಕಿಸ್ತಾನದ ವಿರುದ್ಧ ಸಿಡಿದೆದ್ದ ಗಿಲ್ಗಿಟ್, ಬಾಲ್ಟಿಸ್ತಾನ್ ಹೋರಾಟಗಾರರು: ಇಡೀ ಪಾಕ್ ಆಕ್ರಮಿಸುವ ಎಚ್ಚರಿಕೆ

ಸ್ಥಳೀಯ ಜನತೆಯ ಮೇಲೆ ದೌರ್ಜನ್ಯವೆಸಗುತ್ತಿರುವ ಪಾಕಿಸ್ತಾನದ ವಿರುದ್ಧ ಗಿಲ್ಗಿಟ್, ಬಾಲ್ಟಿಸ್ತಾನ್ ಹೋರಾಟಗಾರರು ಸಿಡಿದೆದ್ದಿದ್ದು, ಸ್ಥಳೀಯರ ಮೇಲೆ ಕಾನೂನು ಬಾಹಿರ ತೆರಿಗೆ ವಿಧಿಸಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿ ಬೀದಿಗಿಳಿದು ಪಾಕಿಸ್ತಾನದ ವಿರುದ್ಧ...
ಪಾಕಿಸ್ತಾನದ ವಿರುದ್ಧ ಸಿಡಿದೆದ್ದ ಗಿಲ್ಗಿಟ್, ಬಾಲ್ಟಿಸ್ತಾನ್ ಹೋರಾಟಗಾರರು: ಇಡೀ ಪಾಕ್ ಆಕ್ರಮಿಸುವ ಎಚ್ಚರಿಕೆ
ಪಾಕಿಸ್ತಾನದ ವಿರುದ್ಧ ಸಿಡಿದೆದ್ದ ಗಿಲ್ಗಿಟ್, ಬಾಲ್ಟಿಸ್ತಾನ್ ಹೋರಾಟಗಾರರು: ಇಡೀ ಪಾಕ್ ಆಕ್ರಮಿಸುವ ಎಚ್ಚರಿಕೆ
ಸ್ಕರ್ದು: ಸ್ಥಳೀಯ ಜನತೆಯ ಮೇಲೆ ದೌರ್ಜನ್ಯವೆಸಗುತ್ತಿರುವ ಪಾಕಿಸ್ತಾನದ ವಿರುದ್ಧ ಗಿಲ್ಗಿಟ್, ಬಾಲ್ಟಿಸ್ತಾನ್ ಹೋರಾಟಗಾರರು ಸಿಡಿದೆದ್ದಿದ್ದು, ಸ್ಥಳೀಯರ ಮೇಲೆ ಕಾನೂನು ಬಾಹಿರ ತೆರಿಗೆ ವಿಧಿಸಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿ ಬೀದಿಗಿಳಿದು ಪಾಕಿಸ್ತಾನದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. 
ಪಾಕಿಸ್ತಾನ ಸರ್ಕಾರ ಸ್ಕರ್ಡು, ಗಿಲ್ಗಿಟ್, ಬಾಲ್ಟಿಸ್ತಾನ್ ಪ್ರಾಂತ್ಯದ ಮೇಲೆ ಹೇರಿರುವ ಕಾನೂನು ಬಾಹಿರ ತೆರಿಗೆ ಕ್ರಮವನ್ನು ವಿರೋಧಿಸಿ ಈ ಪ್ರಾಂತ್ಯದ ಭಾರೀ ಸಂಖ್ಯೆ ಜನರು, ಸಣ್ಣ ವ್ಯಾಪಾರಸ್ಥರು ಮತ್ತು ಉದ್ಯಮಿಗಳು ಇಂದು ಬೀದಿಗಿಳಿದು ಪ್ರತಿಭಟನೆ, ಮೆರವಣಿಗೆಗಳನ್ನು ನಡೆಸುತ್ತಿದ್ದು, ಪಾಕಿಸ್ತಾನ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. 
ಪ್ರತಿಭಟನೆ ವೇಳೆ ಮಾತನಾಡಿರುವ ಪ್ರತಿಭಟನಾಕಾರರು, ಮನೆಯಲ್ಲಿಟ್ಟಿರುವ ಕೋಳಿಗಳಿಗೆ ನೀವು ತೆರಿಗೆಯನ್ನು ಕಟ್ಟುತ್ತಿದ್ದೀರಾ? ಹಾಲಿಗಾಗಿ ಮನೆಯಲ್ಲಿ ಸಾಗಿರುವ ಹಸುಗಳಿಗೆ ನೀವು ತೆರಿಗೆಯನ್ನು ಕಟ್ಟುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. 
ಮನೆಯಲ್ಲಿ ಹೆಚ್ಚುವರಿಯಾಗಿ ಸದಸ್ಯರಿದ್ದರೆ ಅವರಿಗೆ ತೆರಿಗೆ ಕಟ್ಟಬೇಕಿದೆ. ಒಂದು ಕುಟುಂಬದಲ್ಲಿ 5 ಸದಸ್ಯರಿಗಿಂತಲೂ ಹೆಚ್ಚು ಜನರಿದ್ದರೆ, ನಾವು ತೆರಿಗೆ ಕಟ್ಟಬೇಕಿದೆ. ಏನೇ ಆದರೂ ನಾವು ತೆರಿಗೆ ಹಣವನ್ನು ಕಟ್ಟುವುದಿಲ್ಲ ಎಂದು ತಿಳಿಸಿದ್ದಾರೆ. 
ಕರಾಚಿ, ಖೆಟ್ಟಾ, ಲಾಹೋರ್ ಹಾಗೂ ಪಾಕಿಸ್ತಾನದ ಇನ್ನಾವುದೇ ಭಾಗದಲ್ಲಿರುವ ಗಿಲ್ಗಿಟ್, ಬಾಲ್ಟಿಸ್ತಾನದ ಜನರು ತೆರಿಗೆ ಹಣವನ್ನು ಕಟ್ಟದಂತೆ ನಾವು ಈ ಮೂಲಕ ಆಗ್ರಹಿಸಲು ಇಚ್ಛಿಸುತ್ತೇವೆ. ಶೀಘ್ರದಲ್ಲಿಯೇ ಇಡೀ ಪಾಕಿಸ್ತಾನವನ್ನು ಆಕ್ರಮಿಸುತ್ತೇವೆ. 
ಸಾಮಾನ್ಯ ಮೂಲಭೂತ ಹಕ್ಕುಗಳು, ಸಬ್ಸಿಡಿಗಳು ಹಾಗೂ ಸಾಂವಿಧಾನಿಕ ಸ್ಥಾನವನ್ನು ನೀಡದೆಯೇ ನಮ್ಮ ಮೇಲೆ, ವ್ಯಾಪಾರಸ್ಥರ ಮೇಲೆ ದೊಡ್ಡ ಮಟ್ಟದ ತೆರಿಗೆಯನ್ನು ವಿಧಿಸಲಾಗುತ್ತಿದೆ. ತೆರಿಗೆ ಹಣವನ್ನು ಸಂಗ್ರಹಿಸುವ ಅಧಿಕಾರಿಗಳು ಗಿಲ್ಗಿಟ್, ಬಾಲ್ಟಿಸ್ತಾನದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿಲ್ಲ. 
ಅಕ್ರಮವಾಗಿ, ಕಾನೂನು ಬಾಹಿರವಾಗಿ ಪಾಕಿಸ್ತಾನ ಸರ್ಕಾರ ನಮಗೆ ತೆರಿಗೆ ವಿಧಿಸುತ್ತಿದೆ. ತೆರಿಗೆ ಕುರಿತು ಪಾಕಿಸ್ತಾನ ಸರ್ಕಾರ ನೀಡಿರುವ ಸೂಚನೆಗಳನ್ನು ಹಿಂದಕ್ಕೆ ಪಡೆಯದೇ ಹೋದರೆ, ನಮ್ಮ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುತ್ತದೆ. ಇಸ್ಲಾಂ ಧರ್ಮದಲ್ಲಿ ತತ್ವವಿದ್ದು, ಹಕ್ಕುಗಳಿಲ್ಲದ ಮೇಲೆ ಯಾವುದೇ ತೆರಿಗೆಯಿಲ್ಲ ಎಂದು ತಿಳಿಸಲಾಗಿದೆ. ನಮಗೆ ಗುರ್ತಿಕೆಯೇ ಇಲ್ಲ ಎಂದಾದ ಮೇಲೆ ನಾವೇಕೆ ತೆರಿಗೆ ಕಟ್ಟಬೇಕು ಎಂದು ಹೋರಾಟಗಾರರೊಬ್ಬರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com