ಪಾಕ್ ನಿಂದಾಗಿ ಆಫ್ಘಾನಿಸ್ತಾನಕ್ಕೆ ಸೇನೆ ಕಳುಹಿಸಲು ಭಾರತ ಹಿಂದೇಟು: ಜೇಮ್ಸ್ ಮ್ಯಾಟಿಸ್

ಪಾಕಿಸ್ತಾನದಿಂದಾಗಿ ಅಫ್ಘಾನಿಸ್ತಾನ ದೇಶಕ್ಕೆ ಸೇನೆ ಕಳುಹಿಸಲು ಭಾರತ ಹಿಂದೇಟು ಹಾಕುತ್ತಿದೆ ಎಂದು ಅಮೆರಿಕಾ ರಕ್ಷಮಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರು ಗುರುವಾರ ಹೇಳಿದ್ದಾರೆ...
ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್
ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್
ವಾಷಿಂಗ್ಟನ್: ಪಾಕಿಸ್ತಾನದಿಂದಾಗಿ ಅಫ್ಘಾನಿಸ್ತಾನ ದೇಶಕ್ಕೆ ಸೇನೆ ಕಳುಹಿಸಲು ಭಾರತ ಹಿಂದೇಟು ಹಾಕುತ್ತಿದೆ ಎಂದು ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರು ಗುರುವಾರ ಹೇಳಿದ್ದಾರೆ. 
ಸೆನೆಡ್ ಆರ್ಮ್ಸ್ಡ್ ಸರ್ವಿಸಸ್ ಸಮಿತಿ ಮುಂದೆ ಮಾತನಾಡಿರುವ ಮಾತನಾಡಿರುವ ಅವರು, ಯುದ್ಧ ಪೀಡಿ ಅಫ್ಘಾನಿಸ್ತಾನಕ್ಕೆ ಭಾರತ ನೀಡುತ್ತಿರುವ ನೆರವನ್ನು ಕೊಂಡಾಡಿದ್ದಾರೆ. ಇದೇ ವೇಳೆ ಅಫ್ಘಾನಿಸ್ತಾನಕ್ಕೆ ಭಾರತ ತನ್ನ ಸೇನೆಯನ್ನು ಕಳುಹಿಸದಿರುದಕ್ಕೆ ಪಾಕಿಸ್ತಾನವೇ ಕಾರಣ ಎಂದು ಹೇಳಿದ್ದಾರೆ. 
ಅಫ್ಘಾನಿಸ್ತಾನಕ್ಕೆ ಸೇನೆ ಕಳುಹಿಸುವುದರಿಂದ ಗಡಿಯಲ್ಲಿ ಮತ್ತೆ ಹೊಸ ಸಮಸ್ಯೆಗಳು ಉದ್ಭವಗೊಳ್ಳಬಹುದು ಎಂಬ ಉದ್ದೇಶದಿಂದ ಭಾರತ ತನ್ನ ಸೇನೆಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ. 
ಭಾರತ ಮತ್ತು ಪಾಕಿಸ್ತಾನ ನಡುವೆ ಮುಕ್ತ ಗಡಿ ವ್ಯಾಪಾರ ಆರಂಭಗೊಂಡರೆ ಉಭಯ ರಾಷ್ಟ್ರಗಳಿಗೆ ಇದರಿಂದ ಲಾಭವಾಗಲಿದೆ. ಎರಡೂ ರಾಷ್ಟ್ರಗಳಿಕ ಆರ್ಥಿಕ ಲಾಭಗಳಾಗಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com