'ಸಿಪಿಇಸಿಯಿಂದ ಪ್ರಾದೇಶಿಕ ಉದ್ವಿಗ್ನತೆ': ಚೀನಾಗೆ ತಿವಿದ ಅಮೆರಿಕ

ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ ಅಮೆರಿಕ ಮತ್ತೆ ತನ್ನ ವಿರೋಧ ವ್ಯಕ್ತಪಡಿಸಿದ್ದು, ಸಿಪಿಇಸಿಯಿಂದ ಪ್ರಾದೇಶಿಕ ಉದ್ವಿಗ್ನತೆ ಉಲ್ಬಣಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ ಅಮೆರಿಕ ಮತ್ತೆ ತನ್ನ ವಿರೋಧ ವ್ಯಕ್ತಪಡಿಸಿದ್ದು, ಸಿಪಿಇಸಿಯಿಂದ ಪ್ರಾದೇಶಿಕ ಉದ್ವಿಗ್ನತೆ ಉಲ್ಬಣಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದೆ.
ಅಮೆರಿಕದ ಯುದ್ಧ ಶೈಕ್ಷಣಿಕ ಸಂಸ್ಥೆಯೊಂದು ಇಂತಹುದೊಂದು ವರದಿ ನೀಡಿದ್ದು, ಚೀನಾದ ಉದ್ದೇಶಿತ ಸಿಪಿಇಸಿ ಯೋಜನೆ ವಿವಾದಿತ ಪ್ರದೇಶದ ಮೂಲಕ ಹಾದು ಹೋಗುತ್ತದೆ. ಹೀಗಾಗಿ ಇದು ಪ್ರಾದೇಶಿಕ ಉದ್ವಿಗ್ನತೆಗೆ  ಕಾರಣವಾಗುವ ಅಪಾಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಿಪಿಇಸಿ ಹಾದು ಹೋಗುವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಾಂತಿಯುತ ವಾತಾವರಣವಿಲ್ಲ. ಆ ಪ್ರದೇಶದಲ್ಲಿ ಭದ್ರತೆ ಎಂಬುದು ಅಸ್ಥಿರವಾಗಿದೆ. ಈ ಭಾಗದಲ್ಲಿ ಭಾರತ  ಮಾತ್ರ ಪ್ರಜಾಪ್ರಭುತ್ವ ಮತ್ತು ಸ್ಥಿರತೆಯ ಏಕೈಕ ಭದ್ರಕೋಟೆಯಾಗಿದ್ದು, ಪ್ರಸ್ತುತ ಸಿಪಿಇಸಿ ಹಾದು ಹೋಗುವ ಪಾಕ್ ಆಕ್ರಮಿತ ಕಾಶ್ಮೀರ ಭಾರತ ತನ್ನದು ಎಂದು ಹೇಳುತ್ತಾ ಬಂದಿದೆ ಎಂದು ವಾಷಿಂಗ್ಟನ್ ನ ಯುದ್ಧತಂತ್ರಗಳ  ಶೈಕ್ಷಣಿಕ ಸಂಸ್ಥೆಯ ತಜ್ಞ ಡಾ. ರಾಬರ್ಟ್ ಜಿ. ಡೇರಿಯಸ್ ಹೇಳಿದ್ದಾರೆ.
"ಚೀನಾ ತನ್ನ ಸಿಪಿಇಸಿ ಯೋಜನೆಯನ್ನು ಮುಂದುವರೆಸಿದರೆ ದಕ್ಷಿಣ ಏಷ್ಯಾದಲ್ಲಿ ಖಂಡಿತಾ ಪ್ರಾದೇಶಿಕ ಉದ್ವಿಗ್ನತೆ ಉಲ್ಬಣಗೊಳ್ಳುತ್ತದೆ. ಈಗಾಗಲೇ ಚೀನಾ ವಿವಾದಿತ ಪ್ರದೇಶಗಳಾದ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನಗಳಲ್ಲಿ ತನ್ನ  ಕಾಮಗಾರಿ ಆರಂಭಿಸಿದ್ದು, ಸ್ಥಳೀಯರು ಇದಕ್ಕೆ ವಿರೋಧ ಕೂಡ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ವಿಶ್ವಸಮುದಾಯ ಚೀನಾದ ನಡೆಯನ್ನು ನೋಡಿಯೂ ಸುಮ್ಮನಿರುತ್ತದೆ ಎಂದು ಹೇಳಲಾಗದು. ಗಲ್ಗಿಟ್ ಮತ್ತು ಬಾಲ್ಟಿಸ್ತಾನ ಭಾರತದ  ಜಮ್ಮು ಕಾಶ್ಮೀರ ರಾಜ್ಯದ ಭಾಗವಾಗಿದ್ದು, ವಿವಾದತಿ ಪ್ರದೇಶದಲ್ಲಿ ಸಿಪಿಇಸಿ ಕಾಮಗಾರಿ ಸಲ್ಲದು ಎಂದು ಎಚ್ಚರಿಕೆ ನೀಡಿದ್ದಾರೆ.
ಚೀನಾದ ಈ ಕಾಮಗಾರಿಯಿಂದಾಗಿ ಈ ವಿವಾದಿತ ಪ್ರದೇಶಗಳಲ್ಲಿ ಹೇರಳವಾಗಿರುವ ನೈಸರ್ಗಿಕ ಸಂಪನ್ಮೂಲಗಳಾದ ಚಿನ್ನ, ತಾಮ್ರ, ಕಲ್ಲಿದ್ದಲು, ಕಬ್ಬಿಣ ಮತ್ತು ಬೆಳ್ಳಿಯಂತಹ ನೈಸರ್ಗಿಕ ಸಂಪನ್ಮೂಲಗಳು ದುರ್ಬಳಕೆಯಾಗುತ್ತವೆ.  ಇದು ಸ್ಥಳೀಯ ಜನರ ಜೀವನದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಇದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com