ಭಾರತೀಯ ಸೇನಾ ಮುಖ್ಯಸ್ಥರ ಹೇಳಿಕೆ ನಂತರ ದ್ವಿಪಕ್ಷೀಯ ಸಂಬಂಧ ಹಳಿ ತಪ್ಪಬಾರದು ಎಂದ ಚೀನಾ

ಏಕಕಾಲಕ್ಕೆ ಚೀನಾ-ಪಾಕ್ ಜೊತೆ ಯುದ್ಧಕ್ಕೆ ಸಿದ್ಧವಿರಬೇಕು ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹೇಳಿದ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೀಜಿಂಗ್: ಏಕಕಾಲಕ್ಕೆ ಚೀನಾ-ಪಾಕ್ ಜೊತೆ ಯುದ್ಧಕ್ಕೆ ಸಿದ್ಧವಿರಬೇಕು ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹೇಳಿದ ಬೆನ್ನಲ್ಲೇ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹಳಿ ತಪ್ಪಬಾರದು ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಗುರುವಾರ ಹೇಳಿದ್ದಾರೆ.
ಇತ್ತೀಚಿಗೆ ಮುಕ್ತಾಯಗೊಂಡ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶಾಂತಿ ಮಾತುಕತೆ ನಡೆಸಿದ ನಂತರ ಮೊದಲ ಬಾರಿಗೆ ಭಾರತ-ಚೀನಾ ಸಂಬಂಧದ ಬಗ್ಗೆ ಮಾತನಾಡಿರುವ ವಾಂಗ್ ಯಿ, ಉಭಯ ರಾಷ್ಟ್ರಗಳ ಪರಸ್ಪರ ವೈರತ್ವ ಅಥವಾ ಬೆದರಿಕೆ ನಮ್ಮ ಕೈಮೀರದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕಳೆದ ಕೆಲವು ತಿಂಗಳಿಂದ ಒಂದು ನಿರ್ಧಿಷ್ಟ ಕಾರಣಕ್ಕಾಗಿ ಭಾರತ-ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ದುರ್ಬಲವಾಗಿದೆ ಎಂದು ವಾಂಗ್ ತಿಳಿಸಿದ್ದಾರೆ. ಆದರೆ ದೋಕಲಾದಲ್ಲಿ ಚೀನಾ ಜತೆಗಿನ 73 ದಿನಗಳ ಸೇನಾ ಸಂಘರ್ಷದ ಬಗ್ಗೆ ಅವರು ಯಾವುದೇ ಪ್ರಸ್ತಾಪ ಮಾಡಿಲ್ಲ.
ನೇಪಾಳದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಕೃಷ್ಣ ಬಹದ್ದೂರ್ ಮಹರಾ ಅವರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಂಗ್, ಭಾರತ-ಚೀನಾ ದ್ವಿಪಕ್ಷೀಯ ಸಂಬಂಧ ಹಳಿ ತಪ್ಪಬಾರದು ಎಂದರು.
ಇಂದು ಬೆಳಗ್ಗೆಯಷ್ಟೇ ಜನರಲ್‌ ಬಿಪಿನ್‌ ರಾವತ್‌ ಅವರು, ಯಾವುದೇ ಸಂದರ್ಭದಲ್ಲಿ ಚೀನಾ ಮತ್ತು ಪಾಕಿಸ್ತಾನ ಏಕಕಾಲಕ್ಕೆ ಭಾರತದ ಮೇಲೆ ದಾಳಿಗೆ ಮುಂದಾಗಬಹುದು. ಒಂದು ವೇಳೆ ಭಾರತದೊಂದಿಗೆ ಚೀನಾ ಯುದ್ಧಕ್ಕೆ ಮುಂದಾದರೆ ಪಾಕಿಸ್ತಾನ ತನ್ನ ಬಹು ವರ್ಷಗಳ ಮಿತ್ರ ರಾಷ್ಟ್ರವಾದ ಚೀನಾ ಬೆಂಬಲಕ್ಕೆ ನಿಲ್ಲಬಹುದು. ಆಗ ಭಾರತವು ಏಕಕಾಲಕ್ಕೆ ಎರಡು ರಾಷ್ಟ್ರಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com