ಬಿಪಿನ್ ರಾವತ್ ಅಹಂಕಾರದಿಂದ ಭಾರತದ ಗೌರವಕ್ಕೆ ಕಳಂಕ: ಚೀನಾ ಮಾಧ್ಯಮ

ಪಾಕಿಸ್ತಾನ ಹಾಗೂ ಚೀನಾ ಜೊತೆಗೆ ಒಮ್ಮೆಲೆ ಯುದ್ಧಕ್ಕೆ ಭಾರತ ಸಿದ್ಧವರಬೇಕು ಎಂಬ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆಗೆ ಚೀನಾ...
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್
ನವದೆಹಲಿ: ಪಾಕಿಸ್ತಾನ ಹಾಗೂ ಚೀನಾ ಜೊತೆಗೆ ಒಮ್ಮೆಲೆ ಯುದ್ಧಕ್ಕೆ ಭಾರತ ಸಿದ್ಧವರಬೇಕು ಎಂಬ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆಗೆ ಚೀನಾ ಶುಕ್ರವಾರ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ. 
ರಾವತ್ ಹೇಳಿಕೆ ಕುರಿತಂತೆ ಚೀನಾ ಸರ್ಕಾರ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ 'ರಾವತ್ ಅವರ ಅಹಂಕಾರ ಭಾರತಕ್ಕೆ ಕಳಂಕ ತಂದಿದೆ' ಎಂಬ ಶೀರ್ಷಿಕೆಯಡಿಯಲ್ಲಿ ಸಂಪಾದಕೀಯವನ್ನು ಪ್ರಕಟಿಸಿದೆ. 
ಸಂಪಾದಕೀಯದಲ್ಲಿ ಚೀನಾದಲ್ಲಿ ನಡೆದ 9ನೇ ಬ್ರಿಕ್ಸ್ ಸಮಾವೇಶದ ಬಳಿಕ ಭಾರತ ಹಾಗೂ ಚೀನಾ ದ್ವಿಪಕ್ಷೀಯ ಸಂಬಂಧಗಳು ಸುಧಾರಿಸಬಹುದು ಎಂದು ನಿಟ್ಟುಸಿರುವ ಬಿಡುತ್ತಿರುವ ನಡುವಲ್ಲೇ ರಾವತ್ ಅವರ ಈ ಹೇಳಿಕೆ ಸಂಪೂರ್ಣವಾಗಿ ಭಾರತ ಹಾಗೂ ಚೀನಾ ಸಂಬಂಧಗಳ ನಡುವೆ ಹಗೆತನವನ್ನು ಸೃಷ್ಟಿ ಮಾಡಲಿದೆ ಎಂದು ಹೇಳಿಕೊಂಡಿದೆ. 
ಪ್ರಸ್ತುತ ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿಗಳ ಕುರಿತಂತೆ ಭಾರತದ ಜನರಲ್ ಗಳು ಮೂಲ ಜ್ಞಾನವನ್ನು ಹೊಂದಬೇಕಾದ ಅಗತ್ಯವಿದೆ. ಭಾರತವು ತನ್ನ ವಿರೋಧಿ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನವನ್ನು ಏಕಕಾಲದಲ್ಲಿ ಎದುರಿಸುವುದು ಅಸಾಧ್ಯ. ಉಭಯ ರಾಷ್ಟ್ರಗಳ ನಡುವಿನ ಗಡಿ ವಿವಾದ ಶೀಘ್ರದಲ್ಲಿಯೇ ಪರಿಹಾರವಾಗುವುದೆಂದು ಚೀನಾದ ಜನರು ನಿರೀಕ್ಷಿಸುತ್ತಿಲ್ಲ. ಎರಡೂ ಕಡೆಗಳು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ಬಯುತ್ತಿಸುತ್ತಿದ್ದಾರೆ. ಹಾಗೂ ಸದ್ಯ ಯಥಾಸ್ಥಿತಿ ಮುಂಬುವರೆಯಲಿ ಎಂಬುದೇ ಅವರ ಇಚ್ಛೆ ಕೂಡ ಆಗಿದೆ. ಆದರೆ, ಬಿಪಿನ್ ರಾವತ್ ಅವರ ಈ ಹೇಳಿಕೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ ಎಂದು ಬರೆದುಕೊಂಡಿದೆ. 
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ರಾವತ್ ಅವರು, ಭಾರತವು ಎರಡು ದಿಕ್ಕುಗಳ ಕಡೆಗೆ ಯುದ್ಧದ ತಯಾರಿ ಆರಂಭಿಸಬೇಕಿದೆ. ಚೀನಾ ಭಾರತದ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಮತ್ತೊಂದೆಡೆ ಪಾಕಿಸ್ತಾನ ಜತೆ ಮರು ಹೊಂದಾಣಿಕೆಗೆ ಯಾವುದೇ ಅವಕಾಶವಿಲ್ಲದಂತೆ ಕಾಣುತ್ತಿದೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com