ಕಳೆದ ರಾತ್ರಿ 11.50ರ ಸುಮಾರಿಗೆ ಭೂಕಂಪ ಸಂಭವಿಸಿದೆ. ತೈವಾನ್'ನ ಬಂದರು ನಗರ ಹುವಾಲಿನ್ ನಲ್ಲಿ ಸಂಭವಿಸಿದ ಭೂಕಂಪಕ್ಕೆ ಹೋಟೆಲ್ ಕಟ್ಟಡ ಸೇರಿದಂತೆ ಕೆಲವು ಕಟ್ಟಡಗಳು ಸೇರಿದಂತೆ ಕೆಲವು ಕಟ್ಟಡಗಳು ಕುಸಿದು ಬಿದ್ದಿವೆ. ಕುಸಿದ ಕಟ್ಟಡದಿಂದ 150ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಮತ್ತಷ್ಟು ಮಂದಿ ಸಿಲುಕಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 21 ಕಿ.ಮೀ ವ್ಯಾಪ್ತಿಯಲ್ಲಿ 6.4ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.